ಸಾಕ್ರಟೀಸ್-ಸತ್ಯಪಥಿಕ

Author : ಎಲ್. ವಿ. ಶಾಂತಕುಮಾರಿ

Pages 162

₹ 149.00




Year of Publication: 2015
Published by: ಲೋಕಶಿಕ್ಷಣ ಟ್ರಸ್ಟ್ ಗ್ರಂಥಮಾಲಾ
Address: ಜನರಲ್ ಕಾರ್ಯಪ್ಪ ರಸ್ತೆ, ರಿಚ್ ಮಂಡ್ ಸರ್ಕಲ್, ಬೆಂಗಳೂರು

Synopsys

ಲೇಖಕಿ ಎಲ್.ವಿ. ಶಾಂತಕುಮಾರಿ ಅವರು ಬರೆದ ಕೃತಿ-ಸಾಕ್ರಟೀಸ್ ಸತ್ಯಪಥಿಕ. ಸಾಕ್ರಟೀಸ್ ಒಬ್ಬ ಮಹಾನ್ ತತ್ವಜ್ಞಾನಿ. ಈತ ತನ್ನ ವಿಚಾರಗಳನ್ನು ಬರೆದು ಇಟ್ಟಿಲ್ಲವಾದರೂ, ಈತನನ್ನು ಹಿಂಬಾಲಿಸಿ, ವಿಚಾರಗಳನ್ನು ಕ್ರೋಢಿಕರಿಸಿದ್ದು ಪ್ಲೇಟೊ. ಆ ಕಾರಣಕ್ಕಾಗಿಯೇ, ಸಾಕ್ರಟೀಸ್ ಹೆಸರು ಉಳಿದಿದೆ. ಇದಕ್ಕೆ ಪ್ಲೇಟೊವಿನ ಪ್ರಾಮಾಣಿಕತೆಯೇ ಕಾರಣ. ಆತ, ರಾಜನೀತಿ, ಆರ್ಥಿಕತೆ, ಜನಸಾಮಾನ್ಯರ ಅಭಿಪ್ರಾಯಗಳು, ಅವರ ನಿರೀಕ್ಷೆಗಳು ಇತ್ಯಾದಿ ಕುರಿತು ವಿವಿಧೆಡೆ ಸಂಚರಿಸುತ್ತಾ ಹೇಳಿದ ಮಾತುಗಳೇ ಇಲ್ಲಿ ತತ್ವಜ್ಞಾನ-ನೀತಿಗಳಾಗಿವೆ. ಆತ ಸತ್ಯವನ್ನೇ ಪ್ರತಿಪಾದಿಸಬೇಕು. ಆಡಳಿತದ ಸೂತ್ರವೂ ಆಗಬೇಕು ಎಂದೇ ಸಮರ್ಥಿಸಿಕೊಳ್ಳುತ್ತಿದ್ದ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.

About the Author

ಎಲ್. ವಿ. ಶಾಂತಕುಮಾರಿ

ಶಾಂತಕುಮಾರಿ ಎಲ್.ವಿ., ಎಂ.ಎ.(ಇಂಗ್ಲಿಷ್) ಹಿಂದಿ(ವಿಶಾರದ) ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಮೈಸೂರಿನಲ್ಲಿ 10-03-1938 ರಂದು ಜನಿಸಿದರು. ತಂದೆ ಲಕ್ಕೇನಹಳ್ಳಿ ವೆಂಕಟರಾಮಯ್ಯ, ತಾಯಿ- ಲಲಿತಮ್ಮ. ಎಚ್.ವಿ. ಸಾವಿತ್ರಮ್ಮ-2006, ಅನುಪಮಾ ನಿರಂಜನ -2016,, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ರಲ್ಲಿ ಇವರ ಪ್ರಕಟಿತ ಕೃತಿಗಳು. ನೆನಪು ಗರಿ ಬಿಚ್ಚಿದಾಗ, ಚೈತನ್ಯದ ಚಿಲುಮೆ-ಜೀವನ ಚಿತ್ರಗಳು. ಪಪೆ ಮತ್ತು ಇತರ ಕತೆಗಳನ್ನು ಭಾಷಾಂತರಿಸಿದ್ದಾರೆ. ಯುಗಸಾಕ್ಷಿ-2009 ರಲ್ಲಿ ವಿಮರ್ಶಾ ಕೃತಿ ಪ್ರಕಟವಾಗಿದೆ.  ...

READ MORE

Related Books