ಸಾಮವೇದ ಪೂರ್ವಾರ್ಚಿಕ

Author : ಆರ್.ಎಲ್. ಕಶ್ಯಪ

Pages 317

₹ 250.00




Year of Publication: 2017
Published by: ಸಾಕ್ಷಿ ಪ್ರಕಾಶನ
Address: # 460, ಎ-6ನೇ ಅಡ್ಡರಸ್ತೆ, 7ನೇ ಬ್ಲಾಕ್ (ಪಶ್ಚಿಮ), ಜಯನಗರ, ಬೆಂಗಳೂರು-560082

Synopsys

ಹಿರಿಯ ಲೇಖಕ ಆರ್.ಎಲ್. ಕಶ್ಯಪ ಅವರ ಕೃತಿ-ಸಾಮವೇದ, ಪೂರ್ವಾರ್ಚಿಕ. ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ನಾಲ್ಕು ಬಗೆಯ ವೇದಗಳು ಪ್ರಮುಖ ಪಾತ್ರವಹಿಸುತ್ತವೆ. ಆ ಪೈಕಿ ಸಾಮವೇದವೂ ಒಂದು. ಈ ಸಾಮವೇದದಲ್ಲಿ ಪ್ರಸ್ತಾಪಿತ ಮೊದಲ ಭಾಗವೇ- ಪೂರ್ವಾರ್ಚಿಕ. ಉತ್ತರಾರ್ಚಿಕ ಎಂಬುದು ಕೊನೆಯ ಭಾಗ. ಪೂರ್ವಾರ್ಚಿಕ ಭಾಗದಲ್ಲಿ ಅರ್ಥ, ಮಂತ್ರಗಳ ಪ್ರಸ್ತಾಪವಿದೆ. ಒಟ್ಟು650 ಮಂತ್ರಗಳಿವೆ. ಗ್ರಾಮದ ವಿವಿಧ ಜನರ ವೃತ್ತಿ, ವರ್ತನೆ ಇತ್ಯಾದಿ ಇಲ್ಲಿ ಪ್ರಮುಖ ವಿಷಯ., ಪೂರ್ವಾರ್ಚಿಕದಲ್ಲಿ 6 ಪ್ರಪಾಠಕಗಳಿವೆ. ಸಂಗೀತದ ಸಾವಿರಾರು ರಾಗಗಳು, ತಾಳಗಳು ಇಲ್ಲಿ ಬೇರೆ ಬೇರೆ ಗಾನಗಳ ರೂಪದಲ್ಲಿವೆ.

*ಆಗ್ನೇಯಕಾಂಡ*ವೆಂಬುದು ಮೊದಲನೇ ಪ್ರಪಾಠಕ. ಅಗ್ನಿ ಸಂಬಂಧಿ ಋಕ್ಕುಗಳಿವೆ. ಋಗ್ವೇದದ  ಮಂತ್ರಗಳು ಈ ವೇದದಲ್ಲಿವೆ. ಸ್ವರ ಹಾಗೂ ಉಚ್ಚಾರಣೆಯಲ್ಲಿ ಸಾಕಷ್ಟು ಭಿನ್ನತೆಯಿದೆ. 2 ಹಾಗೂ 4ನೇ ಪ್ರಪಾಠಕಗಳಲ್ಲಿ ಇಂದ್ರನ ಸ್ತುತಿ ಇದ್ದು, *ಐಂದ್ರಪರ್ವ* ಎನ್ನಲಾಗುತ್ತದೆ. 5ನೇ ಪ್ರಪಾಠಕ *ಪವಮಾನ ಪರ್ವ*. ಸೋಮ ಸಂಬಂಧಿ ಮಂತ್ರಗಳಿವೆ. 6ನೇ ಪ್ರಪಾಠಕವು-*ಆರಣ್ಯಕ* ಎನ್ನಲಾಗುತ್ತದೆ. ಋಷಿಗಳು, ಅವರ ಕರ್ಮ, ಲಕ್ಷಣ , ಸಾಧನೆ ಇತ್ಯಾದಿ ವಿವರಗಳಿವೆ. 

About the Author

ಆರ್.ಎಲ್. ಕಶ್ಯಪ

’ವೇದಾಂಗ ವಿದ್ವಾನ್‌’ ಆರ್‌. ಎಲ್‌. ಕಶ್ಯಪ ಅವರು ವೇದ ಮತ್ತು ವೇದಾಂಗ ಪರಿಣಿತರು. ಕಶ್ಯಪ ಅವರು ನಾಲ್ಕು ವೇದಗಳಿಗೆ ಭಾಷ್ಯ ಬರೆದಿದ್ದಾರೆ.  ಕೃತಿಗಳು: ಋಗ್ವೇದ ಸಂಹಿತಿ, ಮಂಡಲ -1, ವ್ಯಕ್ತಿ ಹಾಗೂ ಸಮೂದಾಯಗಳ ಪ್ರಗತಿ, ಋಭುಗಳು, ವೇದ ಹಾಘೂ ಉಪನಿಷತ್ತುಗಳ ಋಷಿಗಳು, ಋಗ್ವೇದ ಶಬ್ದಾರ್ಥ ವಿಚಾರ, ಪವಮಾನ, ಆಧುನಿಕ ಕಾಲಕ್ಕೆ ವೇದ ಜ್ಞಾನ, ತೈತ್ತಿರೀಯ ಅರಣ್ಯಕ, ಭಾಗ-2, ಸಾಮವೇದ ಪೂರ್ವಾರ್ಚಿಕ,  ...

READ MORE

Related Books