ಶ್ರೀಮದ್ಭಗವದ್ಗೀತೆ ಚಿಂತನ-ಮಂಥನ

Author : ಸ್ವಾಮಿ ನಿತ್ಯಸ್ಥಾನಂದ

Pages 305

₹ 120.00




Year of Publication: 2017
Published by: ಶ್ರೀ ರಾಮಕೃಷ್ಣ ಆಶ್ರಮ,
Address: ಯಾದವಗಿರಿ, ಮೈಸೂರು

Synopsys

ಸ್ವಾಮಿ ನಿತ್ಯಸ್ಥಾನಂದರು ಬರೆದ ಕೃತಿ-ಶ್ರೀಮದ್ಭಗವದ್ಗೀತೆ: ಚಿಂತನ-ಮಂಥನ. ಭಗವದ್ಗೀತೆಯ ಮೇಲೆ ಅಸಂಖ್ಯ ವ್ಯಾಖ್ಯಾನಗಳು, ವಿವರಣೆಗಳು, ವಿಶ್ಲೇಷಣೆಗಳು, ವಿಮರ್ಶೆಗಳು ಬಂದಿವೆ. ಆದರೂ, ಈ ಗ್ರಂಥ, ತನ್ನ ಚೆಲುವು-ಒಲವನ್ನು ನಂಬಿಕಸ್ಥರಲ್ಲಿ ತೋರುತ್ತಲೇ ಇದೆ. ಬದುಕಿನ ಸಾರವೇ ಇಲ್ಲಿದೆ. ಹೇಗೆ, ಏಕೆ, ಯಾವಾಗ, ಏನು, ಯಾರು...ಹೀಗೆ ಬದುಕಿನ ನಿಗೂಢ ಪ್ರಶ್ನೆಗಳಿಗೂ ಈ ಗ್ರಂಥ ಉತ್ತರ ನೀಡುತ್ತದೆ. ಬದುಕಿನ ಸಾರ್ಥಕತೆಯನ್ನು ತಿಳಿಸುತ್ತದೆ. ಬದುಕಿನ ಸಮಗ್ರ ಆಯಾಮಗಳ ಕುರಿತು ಚೀಮತನೆ ನಡೆಸುತ್ತದೆ. ಸಮಸ್ಯೆಯೂ ವಿವರಿಸುತ್ತದೆ. ಪರಿಹಾರವೂ ಸೂಚಿಸುತ್ತದೆ. ಇಂತಹ ಮಹತ್ವದ ಅಂಶಗಳನ್ನು ಒಳಗೊಂಡ ಕೃತಿ ಇದು.

About the Author

ಸ್ವಾಮಿ ನಿತ್ಯಸ್ಥಾನಂದ

ಸ್ವಾಮಿ ನಿತ್ಯಸ್ಥಾನಂದ ಅವರು ಶ್ರೀ ರಾಮಕೃಷ್ಣ ಪರಮಹಂಸರ ಅನುಯಾಯಿಗಳು. ಶ್ರೀರಾಮಕೃಷ್ಣರ ವಿಚಾರಗಳನ್ನು ಪ್ರಚುರ ಪಡಿಸುವಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ದೇಶದುದ್ದಕ್ಕೂ ಸಂಚರಿಸಿ, ಶ್ರೀರಾಮಕೃಷ್ಣರ-ವಿವೇಕಾನಂದರ ಉಪದೇಶಗಳ ಕುರಿತು ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಕೃತಿಗಳು: ಪರಿಪೂರ್ಣ ವ್ಯಕ್ತಿತ್ವ, ಶ್ರೀಮದ್ಭಗವದ್ಗೀತೆ : ಚಿಂತನ ಮಂಥನ, ವಿಶ್ವಗುರು ಸ್ವಾಮಿ ವಿವೇಕಾನಂದ ...

READ MORE

Related Books