ಕಥಾಮೃತ

Author : ಎ.ಆರ್.  ಕೃಷ್ಣಶಾಸ್ತ್ರಿ

Pages 424

₹ 325.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 080-22203580/0

Synopsys

‘ಕಥಾಮೃತ’ ಕೃಷ್ಣಶಾಸ್ತ್ರಿ ಎ.ಆರ್ ಅವರ ಅಧ್ಯಾತ್ಮಿಕ ಕೃತಿ. ಇಲ್ಲಿ ಸೋಮದೇವನ ಪದ್ಯಕಾವ್ಯ, ಕಥಾಸರಿತ್ಸಾಗರ ಹಲವು ಭಾಷೆಗಳಿಗೆ ಭಾಷಾಂತರವಾಗಿ ಕಥಾಶಾಸ್ತ್ರದ ವ್ಯಾಸಂಗಕ್ಕೆ ಸಾಧನವಾಗಿದೆ. ಕತೆ-ಕತೆಗಳೆಂಬ ನದಿಗಳು ಸೇರಿ ಆಗಿರುವ ಸಾಗರವೇ ಕಥಾಸರಿತ್ಸಾಗರ ಅದರ ಸಂಗ್ರಹರೂಪವೇ ಕಥಾಮೃತ. ಇಲ್ಲಿ ಹಲವು ಕತೆಗಳಿವೆ, ಎಲ್ಲ ವಯೋಮಾನದವರಿಗೂ ಪ್ರಿಯವಾಗುವ ಪ್ರಾಚೀನ ಭರತ ಖಂಡದ ಅತ್ಯುತ್ತಮ ಕಥೆಗಳಿವೆ.

About the Author

ಎ.ಆರ್.  ಕೃಷ್ಣಶಾಸ್ತ್ರಿ
(12 February 1890 - 01 February 1968)

ಮಹಾಭಾರತವನ್ನು ಸರಳಗನ್ನಡದಲ್ಲಿ ಹೇಳುವ ವಚನ ಭಾರತದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಿರುವ ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸ್ಥಾಪಕರಾಗಿ, ಸಂಪಾದಕರಾಗಿ ನೀಡಿದ ಕೊಡುಗೆ ಅಮೂಲ್ಯ. 1890ರ ಫೆಬ್ರುವರಿ 12ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ ತಾಯಿ ವೆಂಕಮ್ಮ. ತಂದೆಯಿಂದ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ಬಿ.ಎ. ಪದವಿ (1913)  ಮತ್ತು ಮದರಾಸಿನಲ್ಲಿ ಕನ್ನಡ ಎಂ.ಎ. (1915) ಪದವಿ ಪಡೆದರು. ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಅವರು ನಂತರ 1916ರಲ್ಲಿ ಸೆಂಟ್ರಲ್ ...

READ MORE

Related Books