ಬಸವಸ್ತೋತ್ರದ  ವಚನಗಳು

Author : ಎಂ.ಎಂ. ಕಲಬುರ್ಗಿ

Pages 230




Published by: ಕನ್ನಡ ಅಧ್ಯಯನ ಪೀಠ
Address: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

Synopsys

’...ಯಾವ ಶರಣನ ವಿಷಯವಾಗಿಯೂ ಇಲ್ಲದಷ್ಟು ಸ್ತುತಿರೂಪದ ಅನೇಕ ವಚನಗಳು ಚರಿತ್ರೆ, ಪುರಾಣ ರೂಪದ ಅನೇಕ ಕಾವ್ಯಗಳೂ ಬಸವಣ್ಣನವರ ಬಗೆಗೆ ಕನ್ನಡದಲ್ಲಿ ಕಣ್ಣು ತೆರೆದಿದ್ದು’ ಅವುಗಳ ಸಂಗ್ರಹರೂಪ ’ಬಸವಸ್ತೋತ್ರದ ವಚನಗಳು’. ಪ್ರಭುದೇವರಿಂದ ಹಿಡಿದು ಜೋಳಬಸವರಾಜದೇವರು ಸಂಪಾದಿಸಿದ ವಚನಗಳವರೆಗೆ ಬಸವ ಸ್ತುತಿ ಹರಡಿಕೊಂಡಿದೆ.

ಡಾ.ಎಂ.ಎಸ್. ಸುಂಕಾಪುರ ಅವರ ಪ್ರಧಾನ ಸಂಪಾದಕತ್ವ ಹಾಗೂ ಡಾ.ಎಂ.ಎಂ.ಕಲಬುರ್ಗಿಯವರ ಸಂಪಾದಕತ್ವದಲ್ಲಿ ಕೃತಿ ಪ್ರಕಟಿತ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books