ಪ್ರಾಚೀನ ಭಾರತದಲ್ಲಿ ಶೂದ್ರರು

Author : ವಿವಿಧ ಅನುವಾದಕರು

Pages 184

₹ 90.00




Year of Publication: 2003
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಪ್ರಾಚೀನ ಭಾರತದಲ್ಲಿ ಶೂದ್ರರು’ ಆರ್‌. ಎಸ್‌. ಶರ್ಮ ಅವರ ಸಂಶೋಧನಾತ್ಮಕ ಕೃತಿಯಾಗಿದೆ. ಜನಾಂಗೀಯ ಅಸಮಾನತೆ ಪ್ರಾಚೀನ ಭಾರತದಲ್ಲಿ ಯಾವುದೋ ಒಂದು ಕಾಲಘಟ್ಟದಲ್ಲಿ ಉದ್ಭವಿಸಿ ಮೇಲ್ವರ್ಗದ ಮೂರೂ ವರ್ಣಗಳ ಸೇವೆ ಮಾಡಲು ಶೂದ್ರರನ್ನು ದೈವಿಕ ಕಾರಣ ನೀಡಿ ಉಪಯೋಗಿಸಿಕೊಳ್ಳಲಾಯಿತು. ಪ್ರಾಚೀನ ಭಾರತದ ಇತಿಹಾಸದ ಅನೇಕ ಸತ್ಯನಿಷ್ಠುರಗಳನ್ನು ಲೇಖಕರು ಈ ಕೃತಿಯಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Reviews

ಹೊಸತು-2004- ಡಿಸೆಂಬರ್‌

ಬ್ರಾಹ್ಮಣೋSಸ್ಯ ಮುಖಮಾಸೀದ್... ಪದ್ಮಾಂ ಶೂದ್ರೋ ಅಜಾಯತ || ಇದು ವೇದಕಾಲೀನ ಪ್ರಕೃತಿಯ ವಿರಾಟ್ ಪುರುಷನ ಅಗಾಧತೆಯನ್ನು ಋಷಿಗಳು ವರ್ಣಿಸುವ ಪುರುಷ ಸೂಕ್ತದಲ್ಲಿನ ಒಂದು ಮಂತ್ರ. ಅಂದು ಯಾವ ಅರ್ಥದಲ್ಲಿ ಅದ್ಭುತವೊಂದನ್ನು ಅವರು ಹಾಗೆ ಸ್ತುತಿಸಿದರೋ ಅಂತೂ ಭಾರತೀಯ ಸಮಾಜದಲ್ಲಿ ಭಗವದ್ಗೀತೆಯ ರಚನೆಯ ಕಾಲಕ್ಕೆ ಚಾತುರ್ವಣ್ಯ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಮರ್ಥವಾಗಿ ಬಳಸಿಕೊಳ್ಳ ಲಾಯಿತು. ಜನಾಂಗೀಯ ಅಸಮಾನತೆ ಪ್ರಾಚೀನ ಭಾರತದಲ್ಲಿ ಯಾವುದೋ ಒಂದು ಕಾಲಘಟ್ಟದಲ್ಲಿ ಉದ್ಭವಿಸಿ ಮೇಲ್ವರ್ಗದ ಮೂರೂ ವರ್ಣಗಳ ಸೇವೆ ಮಾಡಲು ಶೂದ್ರರನ್ನು ದೈವಿಕ ಕಾರಣ ನೀಡಿ ಉಪಯೋಗಿಸಿಕೊಳ್ಳಲಾಯಿತು. ಪ್ರಾಚೀನ ಭಾರತದ ಇತಿಹಾಸದ ಅನೇಕ ಸತ್ಯನಿಷ್ಠುರಗಳನ್ನು ನಮಗೆ ಎತ್ತಿ ತೋರಿಸಿದ ಪ್ರೊ|| ಶರ್ಮ ಅವರು ಶೂದ್ರ ಸಮುದಾಯ ನಾಲ್ಕನೇ ದರ್ಜೆ ಪ್ರಜೆಯಾಗಿ ಇತಿಹಾಸದ ಕುಲುಮೆಯಲ್ಲಿ ಬೆಂದು ಹಾಯ್ದು ಬಂದ ಮೌನ ಸಂಘರ್ಷವೊಂದನ್ನು ತಿಳಿಸುತ್ತಾರೆ.

Related Books