ಕನ್ನಡ ಶಾಸನ ಮತ್ತು ಸಾಹಿತ್ಯದಲ್ಲಿ ಶಾಪ

Author : ಟಿ.ಡಿ.ರಾಜಣ್ಣ ತಗ್ಗಿ

Pages 280

₹ 220.00




Year of Publication: 2010
Published by: ಬಂಡಾರ ಪ್ರಕಾಶನ
Address: ಮಸ್ಕಿ, ರಾಯಚೂರು ಜಿಲ್ಲೆ
Phone: 9886407011

Synopsys

‘ಕನ್ನಡ ಶಾಸನ ಮತ್ತು ಸಾಹಿತ್ಯದಲ್ಲಿ ಶಾಪ’ ಲೇಖಕ ಡಾ.ಟಿ.ಡಿ. ರಾಜಣ್ಣ ತಗ್ಗಿ ಅವರ ಸಂಶೋಧನಾ ಕೃತಿ. ಶಾಸನ ಮತ್ತು ಸಾಹಿತ್ಯಗಳೆರಡೂ ಸಂಸ್ಕೃತಿಯ ಉತ್ಪನ್ನಗಳು. ಈ ಎರಡೂ ಪ್ರಕಾರಗಳಲ್ಲಿ ಶಾಪ ಎಂಬ ಪರಿಕಲ್ಪನೆ ಹೇಗೆಲ್ಲಾ ಅಭಿವ್ಯಕ್ತವಾಗಿದೆ. ಅದು ಸಾಮಾಜದ, ಸಂಸ್ಕೃತಿಯ ಅವನತಿಗೆ ಮತ್ತು ಬೆಳವಣಿಗೆಗೆ, ಬದಲಾವಣೆಗೆ ಹೇಗೆ ಪೂರಕವಾಗಿ ಅಭಿವ್ಯಕ್ತವಾಗಿದೆ ಎಂಬ ವಿವರಗಳನ್ನೆಲ್ಲ ಸಂಗ್ರಹ ಮಾಡಿ, ಅವುಗಳನ್ನು ತೌಲನಿಕ ಅಧ್ಯಯನಕ್ಕೆ ಒಳಗು ಮಾಡಲಾಗಿದೆ. ಶಾಪಗಳ ವೈವಿಧ್ಯತೆ ಹಾಗೂ ಪರಿಣಾಮಗಳನ್ನು ಕುರಿತ ಎಲ್ಲ ಮಾಹಿತಿಗಳನ್ನು ವಿವರಗಳನ್ನು ವಿಶ್ಲೇಷಣೆಗೆ, ವ್ಯಾಖ್ಯಾನಕ್ಕೆ ಒಳಗು ಮಾಡುವ ಒಂದು ಪ್ರಕಟಿತ ಆಕರಗಳ ಮೂಲಕ ನಡೆಸಿದ ಅಧ್ಯಯನವಾಗಿದೆ. ಅನುಷಂಗಿಕ ಆಕರಗಳಿಗಿಂತ ಪ್ರೈಮರಿ ಆಕರಗಳ ಬಗ್ಗೆಯೇ ಹೆಚ್ಚು ಒತ್ತು ನೀಡಿ, ಅಂತಹ ಕಾವ್ಯಗಳನ್ನು, ಶಾಸನಗಳನ್ನು ಓದಿ, ಹುಡುಕುವ ಕೆಲಸವನ್ನು ಲೇಖಕರು ಮಾಡಿದ್ದಾರೆ. 

 

About the Author

ಟಿ.ಡಿ.ರಾಜಣ್ಣ ತಗ್ಗಿ

ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.   ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...

READ MORE

Related Books