ವಿಚಾರ ವಿಹಾರ

Author : ಹನಿಯೂರು ಚಂದ್ರೇಗೌಡ

Pages 432

₹ 500.00




Year of Publication: 2021
Published by: ವಂಶಿ ಪಬ್ಲಿಕೇಷನ್ಸ್‌
Address: #ಗಾಯತ್ರಿ ಕಾಂಪ್ಲೆಕ್ಸ್, ಟಿ. ಬಿ ಬಸ್ ಸ್ಟಾಪ್ ಹತ್ತಿರ, ಬಿ. ಎಚ್ ರೋಡ್, ಸುಭಾಷ್ ನಗರ, ನೆಲಮಂಗಲ ಬೆಂಗಳೂರು-562123
Phone: 9916595916

Synopsys

'ವಿಚಾರ ವಿಹಾರ ' ಕೃತಿಯು ಹನಿಯೂರು ಚಂದ್ರೇಗೌಡ ಹಾಗೂ ಲೋಹಿತ್ ಪಿ ಅವರ ಸಂಪಾದಿತ ಸಂಶೋಧನಾ ಗ್ರಂಥ. ಕರ್ನಾಟಕದ ಸರಿಸುಮಾರು 20-25 ವಿಶ್ವವಿದ್ಯಾಲಯಗಳಿಂದ ಏನಿಲ್ಲವೆಂದರೂ ವಾರ್ಷಿಕ 300 ರಿಂದ 400ಕ್ಕೂ ಅಧಿಕ ಸಂಶೋಧನಾ ಪ್ರಬಂಧ ಮಂಡನೆಯಾಗುತ್ತವೆ. ಈ ಸಂಶೋಧನಾ ಕೃತಿಯು ಹಲವಾರು ಬರಹಗಳನ್ನು ಒಳಗೊಂಡಿದೆ. ತೆಲುಗಿನ ಒಂದು ಮಾತಿನಂತೆ, “ ಥೀಸಿ ಥೀಸಿ ರಾಯೋದೇ ಥೀಸಿಸ್” ಅಂದರೆ ’ ಹುಡುಕಿ ಹುಡುಕಿ ಬರೆಯೋದೇ ಥೀಸಿಸ್” ಎಂಬಂತಾಗಿದೆ ಇವತ್ತಿನ ಸಂಶೋಧನಾ ಪ್ರಬಂಧ ಮತ್ತು ಸಂಶೋಧನಾ ಲೇಖನಗಳ ಪರಿಸ್ಥಿತಿ ಎನ್ನುತ್ತಾರೆ ಲೇಖಕರು. ಸರಿಸುಮಾರು ಅರ್ಧಶತಕ ಅವಧಿಯ ಲೇಖಕರ ಬಹುಶಿಸ್ತೀಯ- ಬಹುಭಾಷೀಯ ಲೇಖನಗಳನ್ನು ಇಲ್ಲಿ ಸಂಕಲಿಸಲಾಗಿದೆ. 

About the Author

ಹನಿಯೂರು ಚಂದ್ರೇಗೌಡ

ಲೇಖಕ ಹನಿಯೂರು ಚಂದ್ರೇಗೌಡ ಮೂಲತಃ ಚನ್ನಪಟ್ಟಣದವರು. ಬಿಎಡ್., ಎಂ.ಎ., ಎಂ.ಫಿಲ್., ಪಿಎಚ್ಡಿ., ಡಿ.ಲಿಟ್., ಪಿಜಿಡಿಟಿಎಚ್. ಪದವೀಧರರು. ಕರ್ನಾಟಕ ಬುಡಕಟ್ಟು ಪರಿಷತ್ತಿನ ಸಂಸ್ಥಾಪಕರೂ, ಬರಹಗಾರ, ನಟ, ರೇಡಿಯೋ ಜಾಕಿ, ಸಂದರ್ಶಕರೂ ಹೌದು. ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯ ಕೇಂದ್ರಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಜಾನಪದ, ಅಲೆಮಾರಿ ಬುಡಕಟ್ಟು,ಸೋಲಿಗ, ಮಲೆ ಕುಡಿಯ, ಜೇನು ಕುರುಬ, ಕಾಡು ಗೊಲ್ಲ, ಹಂದಿ ಜೋಗಿ, ಸುಡುಗಾಡು ಸಿದ್ಧ, ದೊಂಬ್ಬ, ಹಕ್ಕಿ ಪಿಕ್ಕಿ, ದುರ್ಗ ಮುರ್ಗಿ, ಬುಡುಬುಡಿಕೆ, ಕೋಲೆ ಬಸವ ಹೀಗೆ ವಿವಿಧ ಬಡಕಟ್ಇಟ ಸಮೂಹಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಕಿರುತೆರೆ ಚಿತ್ರಗಳಲ್ಲೂ ನಟಿಸಿದ್ದಾರೆ. ಕೃತಿಗಳು: ವಿಚಾರ ವಿಹಾರ (ಸಂಪಾದನೆ) ಪ್ರಶಸ್ತಿ-ಪುರಸ್ಕಾರಗಳು: ರಾಷ್ಟ್ರೀಯ ಯುವ ಕೆಂಪೇಗೌಡ ...

READ MORE

Related Books