ಭಾರತೀಯ ಗಣಿತ ಶಾಸ್ತ್ರ ಹಾಗೂ ಶಾಸ್ತ್ರಜ್ಞರ ಚರಿತ್ರೆ

Author : ವೇಣುಗೋಪಾಲ ಹೇರೂರ

Pages 160

₹ 70.00




Year of Publication: 2002
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

ಭಾರತೀಯ ಗಣಿತ ಶಾಸ್ತ್ರ ಹಾಗೂ ಶಾಸ್ತ್ರಜ್ಞರ ಚರಿತ್ರೆ ಸಂಶೋಧನಾ ಬರಹದ ಪುಸ್ತಕವನ್ನು ಲೇಖಕ ವೇಣುಗೋಪಾಲ ಹೇರೂರ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ತತ್ತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಭಾರತೀಯರ ಸಾಧನೆ ಸುಪರಿಚಿತ. ಅದರಂತೆ ಅಂಕಗಣಿತ, ಕ್ಷೇತ್ರಗಣಿತ (ಜ್ಯಾಮಿತಿ), ತ್ರಿಕೋನಮಿತಿಶಾಸ್ತ್ರ ಮೊದಲಾದವುಗಳ ಬಳಕೆ ಭಾರತೀಯ ನಾಗರಿಕತೆಯ ವಿಕಾಸಕ್ಕೆ ಅಡಿಪಾಯ ಒದಗಿಸಿತ್ತು. ದಿಗ್ದರ್ಶನ ಮಾತ್ರದ ಈ ಗ್ರಂಥದಲ್ಲಿ ಕಾಲಾನುಕ್ರಮದಲ್ಲಿ ಭಾರತೀಯ ಗಣಿತಶಾಸ್ತ್ರದ ವಿಕಾಸದ ಹಂತಗಳನ್ನು ಪರಿಚಯ ಮಾಡಿಕೊಡಲಾಗಿದೆ. ನಿರೂಪಣೆಯ ಜೊತೆಜೊತೆಗೇ ಸಂಸ್ಕೃತ ಮೂಲಗಳನ್ನೂ ಉಲ್ಲೇಖಿಸಲಾಗಿದೆ. ಅಲ್ಲದೇ ಶಾಸ್ತ್ರಗ್ರಂಥಗಳ ಕುರಿತ ಶೋಧಕಾಂಗ ಇದೀಗ ಯಾವ ಹಂತ ತಲಪಿದೆ ಎಂಬುದನ್ನೂ ಅಲ್ಲಲ್ಲಿ ನಿರ್ದೇಶಿಸಲಾಗಿದೆ. ಈ ಹಿಂದೆಯೇ ಭಾರತೀಯ ಗಣಿತಶಾಸ್ತ್ರದ ಬೆಳವಣಿಗೆಯನ್ನು ಕುರಿತು ಶೋಧಮಾಡಿರುವ ಮಹನೀಯರ ಗ್ರಂಥಗಳಲ್ಲಿನ ಮಾಹಿತಿಗೆ ಗಮನ ಸೆಳೆಯಲಾಗಿದೆ. ಹೀಗೆ ಸಾಮಾನ್ಯರಿಗೆ ಮಾತ್ರವಲ್ಲದೇ ಈ ದಿಶೆಯಲ್ಲಿ ಅಧ್ಯಯನ-ಶೋಧನೆ ಮಾಡಬಯಸುವವರಿಗೂ ಉಪಯುಕ್ತವಾಗುವ ಮಾಹಿತಿ ಈ ಗ್ರಂಥದಲ್ಲಿದೆ.

About the Author

ವೇಣುಗೋಪಾಲ ಹೇರೂರ

ಹಿಂದೂ ಹಾಗೂ ಆಧುನಿಕ ಗಣಿತಗಳೆರಡರಲ್ಲೂ ಸವಿವರವಾಗಿ ಅಧ್ಯಯನ ಮಾಡಿರುವ ವೇಣುಗೋಪಾಲ ಹೇರೂರ, ‘ಮಧ್ಯಯುಗೀನ ಗಣಿತಶಾಸ್ತ್ರಕ್ಕೆ ದಕ್ಷಿಣಭಾರತದ ಕೊಡುಗೆ’ ಅವರ ಗಣಿತಶಾಸ್ತ್ರದ ಕೃತಿ. ‘ಟಿ. ವಿ. ಕಪಾಲಿಶಾಸ್ತ್ರಿ’ ಸ್ಮಾರಕ ಪ್ರಶಸ್ತಿ ಲಭಿಸಿದೆ. ...

READ MORE

Related Books