ಓಡಾಡುತ ಬಯಲು

Author : ಗಿರೀಶ್ ಮೂಗ್ತಿಹಳ್ಳಿ

Pages 322

₹ 325.00




Year of Publication: 2019
Published by: ಆರೇಂಜ್ ಪ್ರಕಾಶನ
Address: #176,12ನೇ ಕ್ರಾಸ್, ಅಗ್ರಹಾರ ದಾಸರಹಳ್ಳಿ, ಮಾಗಡಿ ಮಾಗಡಿ ಮೈನ್ ರೋಡ್, ಬೆಂಗಳೂರು-560079
Phone: 8867732340

Synopsys

‘ಓಡಾಡುತ ಬಯಲು’ ಕೃತಿಯು ಗಿರೀಶ್ ಎಂ.ಬಿ. ಅವರ  ಕೃತಿಯು ಮಕ್ಕಳ ನಾಟಕಗಳ ತಾತ್ತ್ವಿಕ ನೆಲೆಗಳನ್ನು ಒಳಗೊಂಡಿದೆ. ಕೃತಿಯ ಬೆನ್ನುಡಿಯಲ್ಲಿ ನಾ ಡಿ.ಸೋಜ ಅವರು, ಒಂದು ಶತಮಾನದ ಮಕ್ಕಳ ಸಾಹಿತ್ಯದಲ್ಲಿ ನಾಟಕಗಳ ವಿಶೇಷತೆಯನ್ನು ಗುರುತಿಸಿರುವುದು ಈ ಸಂಶೋಧನಾ ಗ್ರಂಥದ ವಿಶೇಷ ಎಂದಿದ್ದಾರೆ. ಆನಂದ ವಿ. ಪಾಟೀಲ ಅವರು, ಗಿರೀಶ್ ಮೂಗ್ತಿಹಳ್ಳಿ ಅವರ ಪ್ರಬಂಧ ಹಲವಾರು ನಿಟ್ಟಿನಲ್ಲಿ ಅಧ್ಯಯನಾಸಕ್ತರನ್ನು ಸೆಳೆಯುತ್ತದೆ. ಬಹುಮುಖ್ಯವಾಗಿ ಇದು ತಾತ್ವಿಕ ಚಿಂತನೆಯನ್ನ ಮುಂದಿಟ್ಟುಕೊಂಡಿರುವುದು, ಕರ್ನಾಟಕದಲ್ಲಿಯೇ ವಿಭಿನ್ನ ಬಗೆಯ ನಾಟಕ ಎನ್ನುವುದಕ್ಕೆ ಒಂದು ಬಗೆಯ ನಿರ್ದಿಷ್ಟತೆ ಸ್ಪಷ್ವವಾಗಿ ಕಾಣಿಸದೇ ಇರುವುದರ ಸಂದರ್ಭದಲ್ಲಿ ಈ ಬಗೆಯ ಚರ್ಚೆಗಳು ಬಹು ಮಹತ್ವದ್ದು ಎನಿಸುತ್ತವೆ’ ಎಂದಿದ್ದಾರೆ. 

ಎಂ.ಎನ್. ಮಹೇಶ್ ಅವರು, ‘ಈ ಸಂಶೋಧನೆಯು ವಿವರಣಾತ್ಮಕವೂ ಆಗಿದೆ. ರೂಪಿಸಿಕೊಂಡ ವಿಷಯ ಕುರಿತು ಸಂಶೋಧಕರು ಸಮಗ್ರವಾದ ಮಾಹಿತಿಗಳನ್ನು ಸಂಗ್ರಹಿಸಿ ಗಂಭೀರವಾದ ಅಧ್ಯಯನವನ್ನು ಮಾಡಿದ್ದಾರೆ. ಅವರ ಶ್ರಮ ಮತ್ತು ಉತ್ಸಾಹವನ್ನು ಮೆಚ್ಚಲೇಬೇಕು ಎಂದು ವಿವರಿಸಿದ್ದಾರೆ. ಸೋಮಣ್ಣ ಅವರು, ಅನುಬಂಧವನ್ನು ಹೊಸ ಬಗೆಯಲ್ಲಿ ಒಡಮೂಡಿಸಿರುವುದು ಸಂಶೋಧಕನ ಸೃಜನಶೀಲತೆಗೆ ಸ್ಥಾಪಿಸಲ್ಪಟ್ಟಂತಹ ಕೈಗನ್ನಡಿಯಂತೆ ಗೋಚರಿಸುತ್ತದೆ ಎಂದು ಪ್ರಶಂಸಿಸಿದ್ದಾರೆ. 

About the Author

ಗಿರೀಶ್ ಮೂಗ್ತಿಹಳ್ಳಿ

ಲೇಖಕ ಗಿರೀಶ್ ಮೂಗ್ತಿಹಳ್ಳಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿಯವರು. ಎಂ.ಎ, ಪಿಜಿ ಡಿಪ್ಲೊಮಾ ಹಾಗೂ ಪಿಎಚ್.ಡಿ  ಪದವೀಧರರು. ಎನ್.ಇಟಿ ವಿದ್ ಜೆಆರ್.ಎಫ್ ಹಾಗೂ ಕೆಎಸ್.ಇಟಿ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾಗಿರುತ್ತಾರೆ. ಲೇಖನ, ಪ್ರಬಂಧ ಮಂಡನೆ ಮತ್ತು ಕವನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.  ಪ್ರಸ್ತುತ ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದಾರೆ. ಕೃತಿಗಳು : ಅಭಿಗಮನ (ವಿಮರ್ಶಾ ಲೇಖನ), ಬಸವ ಚಳುವಳಿಯ ಫಲಿತಗಳು (ಸಂಶೋಧನೆ), ಆಡಾಡ್ತ ಆಕಾಶ(ವಿಮರ್ಶಾ ಲೇಖನ), ಓಡಾಡುತ ಬಯಲು (ಸಂಶೋಧನೆ), ಅಕ್ಷರ ಮೈತ್ರಿ (ವಿಮರ್ಶಾ ಲೇಖನ), ಚುಕ್ಕಿಯಾಟ (ಕವನ ಸಂಕಲನ), ಬಸವ ಚಳುವಳಿಯ ಫಲಿತಾಂಶಗಳು (ವಚನ ಸಾಹಿತ್ಯ) ...

READ MORE

Related Books