ಜನ ಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ

Author : ರಂಗನಾಥ ಕಂಟನಕುಂಟೆ

Pages 356

₹ 250.00




Year of Publication: 2009
Published by: ಮುದ್ದುಶ್ರೀ ಗ್ರಂಥಮಾಲೆ
Address: ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರದೊಡ್ಡಿ, ನಂ-119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

‘ಜನ ಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ’ ಲೇಖಕ ಡಾ. ರಂಗನಾಥ ಕಂಟನಕುಂಟೆ ಅವರ ಸಂಶೋಧನಾತ್ಮಕ ಕೃತಿ. ಈ ಕೃತಿಗೆ ಕಿ.ರಂ. ನಾಗರಾಜ ಅವರ ಬೆನ್ನುಡಿಯ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ ಸಾಮಾಜಿಕ ಭಾಷಾಶಾಸ್ತ್ರ, ಮನೋವಿಶ್ಲೇಷಣಾತ್ಮಕ ಭಾಷಾಶಾಸ್ತ್ರ, ಭಾಷಾಶಾಸ್ತ್ರದ ವ್ಯಾವಹಾರಿಕ ಪರಿಪ್ರೇಕ್ಷ್ಯ ಇವುಗಳನ್ನು ಪರಿಶೀಲಿಸಿ ಭಾಷೆಯ ಸಂಬಂಧವಾಗಿ ಏರ್ಪಡುವ ಪಾಶ್ಚಾತ್ಯ ಅಹಂಕಾರ ಹಾಗೂ ಪೌರ್ವಾತ್ಯರ ಕೀಳಿರಿಮೆಯ ಪ್ರಶ್ನೆಗಳನ್ನು ಇಲ್ಲಿ ವಿವೇಚಿಸಿದ್ದಾರೆ. ಭಾಷೆಗೂ ಮಾರುಕಟ್ಟೆಗೂ ಇರುವ ಸಂಬಂಧಗಳು, ಬಹುತ್ವದ ಭಾಷಾ ಕಲ್ಪನೆಗೂ ಏಕಾಕೃತಿಯ ಒತ್ತಡಕ್ಕೂ ಮಧ್ಯೆ ಹುಟ್ಟಿರುವ ಘರ್ಷಣೆಗಳನ್ನು ಈ ಕೃತಿ ವಿವೇಚಿಸುತ್ತದೆ ಎಂದಿದ್ದಾರೆ. ಜೊತೆಗೆ ಹೇರಿಕೆಯ ಭಾಷೆಯಾಗಿ ಇಂಗ್ಲಿಶ್, ಬೇಡಿಕೆಯ ಭಾಷೆಯಾಗಿ ಇಂಗ್ಲಿಶ್ ಸರ್ಕಾರಿ ಪ್ರಣೀತವಾದ ಇಂಗ್ಲಿಶ್ ಇಂತಹ ಮುಖ್ಯ ಪ್ರಶ್ನೆಗಳು ಇಲ್ಲಿ ಚರ್ಚಿತವಾಗಿವೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಭಾಷೆ ನಿರ್ವಹಿಸುತ್ತಿರುವ ಅಸಮಾನತೆಯನ್ನು ಈ ಕೃತಿ ವಿಶ್ಲೇಷಿಸುತ್ತದೆ ಎಂದು ಕೀರಂ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಭಾಷೆ, ಸಂಸ್ಕೃತಿ, ರಾಜಕಾರಣ, ಆಕ್ರಮಣಶೀಲತೆ ಮುಂತಾದ ಆಯಾಮಗಳನ್ನು ಸಂಸ್ಕೃತಿಯ ಕೇಂದ್ರ ಪ್ರಶ್ನೆಯಾಗಿಸಿಕೊಂಡಿರುವುದೇ ಇದರ ಮುಖ್ಯ ನೆಲೆ, ಇಂತಹ ಕೃತಿಗಳು ಸಮುದಾಯದ ಸಾಂಸ್ಕೃತಿಕ ಅನನ್ಯತೆಯನ್ನು ಚರ್ಚಿಸುವ ದೃಷ್ಟಿಯಿಂದ ಮಹತ್ವದ ಚರ್ಚೆಗಳನ್ನು ಎಬ್ಬಿಸಬಲ್ಲವು ಎಂದಿದ್ದಾರೆ.

About the Author

ರಂಗನಾಥ ಕಂಟನಕುಂಟೆ

ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...

READ MORE

Related Books