ಮ್ಯಾಸರ ಜಾಡು

Author : ವೀಣಾ ಕೆ. ಆರ್

Pages 148

₹ 140.00




Year of Publication: 2021
Published by: ಬೊಂಬೆ ಪ್ರಕಾಶನ
Address: #617, 1ನೇ ಕ್ರಾಸ್, 2ನೇ ಹಂತ, ಎಂ ಬ್ಲಾಕ್, ಕುವೆಂಪುನಗರ ಮೈಸೂರು.

Synopsys

’ಮ್ಯಾಸರ ಜಾಡು’ ಕೃತಿಯು ವೀಣಾ ಕೆ. ಆರ್ ಅವರ ಸಂಶೋಧನಾಕೃತಿಯಾಗಿದೆ. ’ಮ್ಯಾಸರ ಜಾಡು’ ವಿಶಿಷ್ಟ ಬಗೆಯ ಹತ್ತು ಬರಹಗಳನ್ನು ಒಟ್ಟಾಗಿಸಿರುವ ಸಂಕಲನವಿದು. ಶೀರ್ಷಿಕೆಯೇ ಹೇಳುವಂತೆ ಮಧ್ಯ ಕರ್ನಾಟಕದ ಮ್ಯಾಸಬೇಡ ಸಮುದಾಯದ ವೈವಿಧ್ಯಮಯ ಬದುಕಿನ ಮಗ್ಗಲುಗಳನ್ನು ಇಲ್ಲಿ ವಿಶ್ಲೇಷಣೆ ಮಾಡಲು ಪ್ರಯತ್ನಿಸಲಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಎ.ಎಸ್. ಪ್ರಭಾಕರ ಅವರು , ಮಧ್ಯೆ ಕರ್ನಾಟಕದ ವಿಶಾಲ ಹುಲ್ಲುಗಾವಲಲ್ಲಿ ವಾಸಿಸುತ್ತಿರುವ ಕಾಡುಗೊಲ್ಲ ಮತ್ತು ಮ್ಯಾಸಬೇಡ ಸಮುದಾಯಗಳನ್ನು ಹೊರತಾಗಿಸಿ ಕರ್ನಾಟಕದ ಸಾಮಾಜಿಕ ಚರಿತ್ರೆಯನ್ನು ಬರೆಯಲು ಸಾಧ್ಯವಿಲ್ಲ. ಇದಲ್ಲದೆ, ಭಾರತದ ದಖ್ಖನ್ ಪ್ರಸ್ಥಭೂಮಿಯ ಪ್ರಾಚೀನ ಚರಿತ್ರೆಯ ಕುರುಹುಗಳು ಈ ಎರಡೂ ಸಮುದಾಯಗಳ ಅಂತಸ್ಥ ಜಗತ್ತಿನಲ್ಲಿ ಹುದುಗಿವೆ. ಆಹಾರ ಸಂಗ್ರಹಣೆ, ಬೇಟೆ, ಪಶುಪಾಲನೆ ಮತ್ತು ಕೃಷಿಯಂತಹ ಆದಿಮ ಉತ್ಪಾದನಾ ಚಟುವಟಿಕೆಗಳನ್ನು ಅಭ್ಯಸಿಸುವ ಆಸಕ್ತರಿಗೆ ಈ ಎರಡೂ ಸಮುದಾಯಗಳು ಜೀವಂತ ಆಕರಗಳಾಗಿವೆ. ಕರ್ನಾಟಕದ ಸಮುದಾಯಗಳಲ್ಲಿ ಕಾಡುಗೊಲ್ಲ ಮತ್ತು ಮ್ಯಾಸಬೇಡ ಸಮುದಾಯಗಳ ಆಚರಣೆ, ಮೌಖಿಕ ಸಾಹಿತ್ಯ, ವಿಶಿಷ್ಟ ದೈವಾರಾಧನೆ ಮತ್ತು ಸಂಪ್ರದಾಯಗಳಲ್ಲಿ ಕನ್ನಡ ನೆಲದ ಆದಿಮ ಚಹರೆಗಳು ಅಡಕವಾಗಿವೆ. ಈ ಸಮುದಾಯಗಳ ಪ್ರಸ್ತುತ ಅನನ್ಯತೆಗಳು ಕೇವಲ ಕುರುಹುಗಳಾಗಿ ಮಾತ್ರ ಅಸ್ತಿತ್ವದಲ್ಲಿಲ್ಲ, ಬದಲಿಗೆ ಜನಬದುಕಿನ ವರ್ತಮಾನದಲ್ಲಿ ಹಾಸುಹೊಕ್ಕಾಗಿವೆ. ಜನಜೀವನದ ನಿತ್ಯ ವರ್ತಮಾನದಲ್ಲಿ ಈ ಆದಿಮ ರೂಢಿಸಂಪ್ರದಾಯಗಳು ಜೀವಂತವಾಗಿವೆ. ಈ ಕಾರಣಕ್ಕಾಗಿಯೇ ಕಾಡುಗೊಲ್ಲ ಮತ್ತು ಮ್ಯಾಸಬೇಡ ಸಮುದಾಯಗಳ ಜೀವನ ವಿಧಾನಗಳನ್ನು ಅಧ್ಯಯನ ಮಾಡುವ ವಿದ್ವಾಂಸರಿಗೆ ಅಲ್ಲಿ ಮೊಗೆದಷ್ಟೂ ಜ್ಞಾನ ಲಭ್ಯವಾಗುತ್ತದೆ. ಪ್ರಸ್ತುತ ಸಂಕಲನದ ಅನೇಕ ಬರಹಗಳಲ್ಲಿ ಆಗ್ರಹದ ದನಿ ಇರುವಂತೆ ಭಾಸವಾಗುತ್ತಿದೆ. ಬುಡಕಟ್ಟುಗಳ ಬದುಕಿಗೆ ಬೇಕಾದ ಸಹಜ ಹಕ್ಕುಗಳನ್ನು ಗಟ್ಟಿ ದನಿಯಲ್ಲಿ ಕೇಳುವ ತವಕ ಇಲ್ಲಿದೆ.

About the Author

ವೀಣಾ ಕೆ. ಆರ್

ವೀಣಾ ಕೆ. ಆರ್. ಅವರು ಮೂಲತಃ ಮೊಳಕಾಲ್ಮೂರು ತಾಲೂಕಿನವರು. ಪ್ರೌಢ ಶಿಕ್ಷಣವನ್ನು ಮತ್ತು ಪಿ.ಯು.ಸಿಯನ್ನು ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಬಿ.ಎ ಪದವಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಡೆದಿದ್ದಾರೆ. ಸಮಾಜಶಾಸ್ತ್ರ ವಿಷಯದಲ್ಲಿ ಕರ್ನಾಟಕ ರಾಜ್ಯ ಉಪಾನ್ಯಾಸಕರ ಅರ್ಹತೆ ಪರೀಕ್ಷೆಯನ್ನು ಪಾಸುಮಾಡಿದ್ದು, ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯ, ಹಂಪಿ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ “ಮ್ಯಾಸಬೇಡರ ರೊಪ್ಪಗಳು: ಪರಂಪರೆ ಮತ್ತು ವರ್ತಮಾನ” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡಿರುತ್ತಾರೆ. ಕೃತಿಗಳು: ‘ಮ್ಯಾಸರ ಜಾಡು’ ...

READ MORE

Related Books