ಶ್ರೀಪ್ರಸನ್ನವೆಂಕಟದಾಸಾರ್ಯಕೃತ ಶ್ರೀಲಕ್ಷ್ಮೀದೇವಿ ಅಪ್ರಕಟಿತ ಸ್ತುತಿರತ್ನಗಳು

Author : ಲಕ್ಷ್ಮೀಕಾಂತ್ ಪಾಟೀಲ್

Pages 160

₹ 140.00




Year of Publication: 2019
Published by: ಪ್ರಸನ್ನ ವೆಂಕಟ ಪ್ರಕಾಶನ
Address: #15, ಮಂತ್ರಾಲಯ, ಪ್ರಶಾಂತಿನಗರ, 9ನೇ ‘ಬಿ’ ಮುಖ್ಯ ರಸ್ತೆ
Phone: 07975442458

Synopsys

‘ಶ್ರೀಪ್ರಸನ್ನವೆಂಕಟದಾಸಾರ್ಯಕೃತ ಶ್ರೀಲಕ್ಷ್ಮೀದೇವಿ ಅಪ್ರಕಟಿತ ಸ್ತುತಿರತ್ನಗಳು’ ಸಂಪುಟ -4 ಕೃತಿಯು ಲಕ್ಷ್ಮೀಕಾಂತ್ ಪಾಟೀಲ್ ಅವರ ಸಂಶೋಧನಾ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಭಾರತೀಯ ತತ್ವಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕದ ಹರಿದಾಸ ಪರಂಜ ತನ್ನದೇ ವೈಶಿಷ್ಟ್ಯತೆಯನ್ನು ಪುರುಷಾರ್ಥ ದನದಮೂಲವಾದ ಸಾರ್ಥಕ ಬದುಕಿನ ಧೈಯ, ಪರಿಕಲ್ಪನೆ ಭಾರತೀಯರದಾಗಿನ ನೀ ಮಾನವ ಮಾತ್ರ ನೆಲದ ಬದುಕಿನ ಸಾರ್ಥಕತೆ, ಅತ್ತಶೋಧನೆ, ವ್ಯಕ್ತಿ ಸಮ ಸಮನ್ವಯ ಚಿಂತನೆ, ಜೀವನ ದೃಷ್ಟಿಕೋನ, ಮೌಲ್ಯ ಸಂಸ್ಥಾಪನೆ ಮುಂತಾದ ಆತ್ಮವಿಶ್ವಾಸದ ಹಲವು ಆಯಾಮಗಳನ್ನು ಒಳಗೊಂಡು ಅದ್ಭುತವಾದ ಎಲ್ಲ ಮೌಲ್ಯದೊಡನೆ ಆವಿರ್ಭವಿಸುವುದು ಹರಿದಾಸ ಸಾಹಿತ್ಯ ಶ್ರೀಮಧ್ವರ ದಿಗ್ದರ್ಶನದಲ್ಲಿ, ಇವರು ಮನಃಪ್ರತಿಷ್ಠಾಪಿಸಿದ ಸಿದ್ಧಾಂತ ಕ್ಷೇತ್ರವನ್ನು ಅತ್ಯಸಾತಿ ಮಾಡಿಕೊಂಡ ದಿವ್ಯ ಚೇತನರು ಹರಿದಾಸರು, ಯತಿವರ ದಾಸವರ್ಗ, ಸಾಧಕವರ್ಗ, ಭಕ್ತವರ್ಗ ಮತ್ತು ಸಮಸ್ತ ಮಾನವ ಸಂಕುಲವು ಸರ್ವರಕ್ಷ ಕಾಯಕಲ್ಪವನ್ನು ಪಡೆದಂತೆ ಕಂಗೊಳಿಸುತ್ತಿದೆ. ಈಶ-ಜೀವ-ಜಡಗಳನ್ನು ಕುರಿತ, ಆಧ್ಯಾತ್ಮ, ಸತ್ಯಶೋಧನೆ, ಪರಮಾತ್ಮನ ಅಸ್ಮಿತೆ, ಜೀವನ ಸಂಕಲ್ಪ ಸಿದ್ಧಿಯ ಅದ್ಭುತ ಜಗತ್ತಿನ ಪ್ರವೇಶ ಪಡೆದಂತಿದೆ. ಅಂತರಂಗದ, ಅಂತಃಸತ್ವದ ಧ್ಯಾನ, ಯೋಗ : ಶಕ್ತಿ, ಪ್ರಾಣಾಯಾಮ, ಮುಂತಾದ ಸಾಧನೆಗಳು, ಬಿಂಬಮೂರುತಿಯ ಸಾಕ್ಷಾತ್ಕಾರದ ಎತ್ತರಕ್ಕೆ ಸಾಧಕನನ್ನು ಕೊಂಡೊಯ್ಯುತ್ತವೆ. ಪ್ರಪಂಚದ ಆಣುಅಣುವಿನಲ್ಲಿ, ಕಣಕಣದಲ್ಲಿ, ನೆಲ-ಜಲ-ವೋಮದಲ್ಲಿ ಭೂಮ ದರ್ಶನವನ್ನು ವಿರಾಟ್ ಚಿಂತನೆಯನ್ನು ಕಾಣುತ್ತೇವೆ. ಹರಿದಾಸ ಸಾಹಿತ್ಯದ ಪರಂಪರೆಯನ್ನು ಪ್ರಾಚೀನ, ಆರ್ವಾಚೀನ, ಆಧುನಿಕ ಕಾಲ ಘಟ್ಟದಲ್ಲಿ ಅಧ್ಯಯನ ಮಾಡಿದಾಗ, ಭಾರತದ ಸಾಂಸ್ಕೃತಿಕ ವಲಯದ ಮೇಲೆ ಆದ ಆಘಾತಗಳು, ಆಕಸ್ಮಿಕಗಳು, ಪ್ರಭಾವಗಳು, ಪರಿಣಾಮಗಳು ನಮ್ಮ ಆರ್ಷೇಯವಾದ, ಸನಾತನವಾದ ಜ್ಞಾನ ಕ್ಷಿತಿಜದ ಬಲವನ್ನು, ಸತ್ವವನ್ನು ಗಟ್ಟಿಗೊಳಿಸಿವೆ. ದಿಶೆಯಲ್ಲಿ ಸಂಸ್ಕೃತ ಭಾಷೆಯಲ್ಲಿದ್ದ ವಾಜಿಯ ಭಂಡಾರವೆಲ್ಲ ಕನ್ನಡ ಭಾಷೆಯಲ್ಲಿ, ಗೇಯತೆಯಲ್ಲಿ ರಸಗಟ್ಟಿಯಾಗಿ ಕತ ಶತಮಾನಗಳಿಂದ ಕನ್ನಡ ಲೋಕವನ್ನು, ಕನ್ನಡ ಮನಸ್ಸುಗಳನ್ನು, ಕನ್ನಡದ ಜೀವನ ವಿಧಾನವನ್ನು ಇನ್ನಿಲ್ಲದಂತೆ ಅವಿನಾಭಾವವಾಗಿ ಪರಿಚ್ಯುತಗೊಳಿಸಿದೆ. ಕನ್ನಡ ಧ್ವನಿಗೆ ಪಾವನತೆಯನ್ನು ಧನ್ಯತೆಯನ್ನು ತಂದುಕೊಟ್ಟಿವೆ.

About the Author

ಲಕ್ಷ್ಮೀಕಾಂತ್ ಪಾಟೀಲ್

ಲಕ್ಷ್ಮೀಕಾಂತ್ ಪಾಟೀಲ್ ಅವರು ಹರಿದಾಸ ಸಾಹಿತ್ಯ ಸಂಶೋಧಕ ಮತ್ತು ಗಾಯಕರಾಗಿದ್ದಾರೆ. ಎಂ.ಎ, ಎಂ. ಕಾಂ, ಎಲ್.ಎಲ್.ಎಂ ಹಾಗೂ ಕಾನೂನಿನಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದಿರುವ ಅವರು 20 ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ನಿರ್ವಹಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿದಂತೆ ಹಲವಾರು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ವಚನಗಾಯನ, ಗಮಕವಾಚನ, ತತ್ವಪದ ದರ್ಶನ, ಜಾನಪದ ಮತ್ತು ಭಾವಗೀತೆಗಳ ಸುಗಮ ಸಂಗೀತ ಅವರ ಹವ್ಯಾಸವಾಗಿದೆ. ಅವರಿಗೆ ಶ್ರೀಪ್ರಸನ್ನವೆಂಕಟದಾಸ ಸಂಶೋಧನಾರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಸಂದಿರುತ್ತದೆ. ಕೃತಿಗಳು: ಶ್ರೀಪ್ರಸನ್ನವೆಂಕಟದಾಸಾರ್ಯಕೃತ ಶ್ರೀಲಕ್ಷ್ಮೀದೇವಿ ಅಪ್ರಕಟಿತ ಸ್ತುತಿರತ್ನಗಳು ...

READ MORE

Related Books