ಆಧುನಿಕ ಕನ್ನಡ ಸಾಹಿತ್ಯದಲ್ಲಿ ಖಂಡಕಾವ್ಯಗಳು

Author : ಬಿ. ಆರ್.‌ ಕೃಷ್ಣಕುಮಾರ್

Pages 380

₹ 310.00




Year of Publication: 2019
Published by: ಶ್ರೀ ವಿಘ್ನೇಶ್ವರ ಪ್ರಕಾಶನ
Address: ನಂ. 732/1, ನ್ಯೂ ಜನತಾ ಕಾಲೋನಿ, ಇಲವಾಲ, ಮೈಸೂರು- 571130

Synopsys

ಲೇಖಕ ಡಾ. ಬಿ.ಆರ್.‌ ಕೃಷ್ಣಕುಮಾರ್‌ ಅವರ ಸಂಶೋಧನಾ ಪ್ರಬಂಧ ಕೃತಿ ʻಆಧುನಿಕ ಕನ್ನಡ ಸಾಹಿತ್ಯದಲ್ಲಿ ಖಂಡಕಾವ್ಯಗಳುʼ. ಪುಸ್ತಕದ ಮುನ್ನುಡಿಯಲ್ಲಿ ಪ್ರೊ. ಕೆ.ಎನ್.‌ ಗಂಗಾನಾಯಕ್‌ ಅವರು, “ಖಂಡಕಾವ್ಯವು ಸಾಹಿತ್ಯದ ಪ್ರಮುಖ ಪ್ರಕಾರವಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಆಧುನಿಕ ಕನ್ನಡದಂತೆ ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳಾದ ತೆಲುಗು, ಮಲೆಯಾಳಂ ಮುಂತಾದವುಗಳಲ್ಲೂ ಹಲವು ಖಂಡಕಾವ್ಯಗಳು ರಚನೆಯಾದವು. ಹಾಗಾಗಿ ಕನ್ನಡೇತರ ಭಾಷೆಗಳಲ್ಲಿ ಆಧುನಿಕ ಕಾಲದ ಖಂಡಕಾವ್ಯಗಳು ಎಂಬ ಎರಡನೇಯ ಅಧ್ಯಾಯದಲ್ಲಿ ಸಂಸ್ಕೃತ, ತೆಲುಗು, ಮಲೆಯಾಳಂ ಭಾಷೆಗಳಲ್ಲಿನ ಖಂಡಕಾವ್ಯಗಳ 10 ಭಾಷೆಗಳಲ್ಲಿನ ಖಂಡಕಾವ್ಯಗಳ ಹುಟ್ಟು ಬೆಳೆವಣಿಗೆ; ಅವುಗಳ ಮೇಲಾದ ಪ್ರಭಾವ ಮುಂತಾದವುಗಳನ್ನು ಚರ್ಚಿಸಲಾಗಿದೆ. ಅನಂತರ ಸಂಸ್ಕೃತ ತೆಲುಗು, ಮಲೆಯಾಳಂ ಭಾಷೆಗಳ ತಲಾ ಒಂದೊಂದು ಖಂಡಕಾವ್ಯಗಳನ್ನು ಆಯ್ದುಕೊಂಡು ವಿಮರ್ಶಾತ್ಮಕವಾಗಿ ವಿವೇಚಿಸಲಾಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಖಂಡಕಾವ್ಯಗಳು ರಚನೆಗೊಂಡಿವೆ. ಅವು ವಿವಿಧ ವಸ್ತು, ರೂಪ, ಶೈಲಿ, ವೈವಿಧ್ಯತೆಗಳಿಂದ ಕೂಡಿದ್ದು, ಬಹಳ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಮಹಾಕಾವ್ಯದ ನೆರಳಿನಂತೆ ಕಾಣುವ ಖಂಡಕಾವ್ಯಗಳು ಅದರಷ್ಟು ಯಶಸ್ಸು, ಪ್ರಚಾರಗಳನ್ನು ಪಡೆಯದೆ ಇದ್ದರೂ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಗಿಟ್ಟಿಸಿಕೊಂಡಿವೆ. ಈ ನಿಟ್ಟಿನಲ್ಲಿ ಮೂರನೇ ಅಧ್ಯಾಯದಲ್ಲಿ ಆಧುನಿಕ ಖಂಡಕಾವ್ಯಗಳ ಸ್ಕೂಲ ಪರಿಚಯವನ್ನು ಮಾಡಿಕೊಡಲಾಗಿದೆ. ಆಧುನಿಕ ಪೂರ್ವಕಾಲದ ಮುದ್ದಣ ರಚಿಸಿರುವ ʻಶ್ರೀರಾಮಪಟ್ಟಾಭಿಷೇಕಂ' ಎಂಬ ಖಂಡಕಾವ್ಯದಿಂದ ಹಿಡಿದು 2014ರಲ್ಲಿ ಪ್ರಕಟವಾಗಿರುವ ಎಚ್.ಲಕ್ಷ್ಮೀನಾರಾಯಣಸ್ವಾಮಿ ಅವರ 'ಜಾಲಿ ಮರದ ಜೋಳಿಗೆಯಲ್ಲಿ' ಎಂಬ ಖಂಡಕಾವ್ಯಗಳವರೆಗೆ ಆಧುನಿಕ ಕನ್ನಡ ಖಂಡಕಾವ್ಯಗಳನ್ನು ಪರಿಚಯಾತ್ಮಕವಾಗಿ ಇಲ್ಲಿ ಚರ್ಚಿಸಲಾಗಿದೆ” ಎಂದು ಹೇಳಿದ್ದಾರೆ.

About the Author

ಬಿ. ಆರ್.‌ ಕೃಷ್ಣಕುಮಾರ್

ಡಾ. ಬಿ.ಆರ್.‌ ಕೃಷ್ಣಕುಮಾರ್‌ ಚಾಮರಾಜನಗರದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ., ಬಿ.ಇಡಿ ವ್ಯಾಸಂಗ. ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. 2005ನೇ ಇಸವಿಯಿಂದ ಚಾಮರಾಜನಗರ ಜಿಲ್ಲಾ ಪೊಲೀಸ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಲಾಖೆಯಿಂದ ಅನುಮತಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊ. ಕೆ.ಎನ್.ಗಂಗಾನಾಯಕ್ ರವರ ಮಾರ್ಗದರ್ಶನದಲ್ಲಿ ʻಆಧುನಿಕ ಕನ್ನಡ ಸಾಹಿತ್ಯದಲ್ಲಿ ಖಂಡಕಾವ್ಯಗಳು' ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಬಂಧ ಮಂಡನೆ, ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕಥೆ, ಕವನಗಳ ಪ್ರಕಟಣೆ ಇವರ ಹವ್ಯಾಸ. ಪ್ರಸ್ತುತ ಚಾಮರಾಜನಗರ ...

READ MORE

Related Books