ಕನ್ನಡ ಕೈಫಿಯತ್ತುಗಳು

Author : ಪುರುಷೋತ್ತಮ ಬಿಳಿಮಲೆ

Pages 115

₹ 120.00




Year of Publication: 2022
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ

Synopsys

ಲೇಖಕ ಪುರುಷೋತ್ತಮ ಬಿಳಿಮಲೆ ಅವರ ಕೃತಿ ಕನ್ನಡ ಕೈಫಿಯತ್ತುಗಳು. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ಕೈಫಿಯತ್ತುಗಳ ಜೊತೆ ಸಾಕಷ್ಟು ಒಡನಾಡಿದ್ದ ನಾನು ಹೊಸಪೇಟೆ- ಧಾರವಾಡಗಳ ನಡುವೆ ಹಲವು ಬಾರಿ ಓಡಾಡಬೇಕಾಯಿತು. 1994ರಲ್ಲಿ ಅದು ‘ರ‍್ನಾಟಕದ ಕೈಫಿಯತ್ತುಗಳು’ ಹೆಸರಲ್ಲಿ ಪ್ರಸಾರಾಂಗದಿಂದ ಪ್ರಕಟವಾಯಿತು. ಈ ಬೃಹತ್ ಸಂಪುಟದಲ್ಲಿರುವ ಕೆಲವು ಮಾಹಿತಿಗಳನ್ನು ಸಂಶೋಧಕರು ಬಳಸಿಕೊಂಡಿರುವುದು ಹೌದಾದರೂ ಕೈಫಿಯತ್ತುಗಳನ್ನೇ ಗಮನದಲ್ಲಿರಿಸಿಕೊಂಡು ಸ್ವತಂತ್ರ ಅಧ್ಯಯನ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ಈ ಕಿರು ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಪ್ರೊ. ಕಲಬುರ್ಗಿಯವರಿಂದ ‘ಪಾಚೀನ ಕರ್ನಾಟಕದ ಆಕರ ಸಾಮಗ್ರಿಗೆ ಸಂಬಂಧಪಟ್ಟ ಒಂದು ಹೊಸ ಚಿನ್ನದ ಗಣಿ’ ಎಂದು ಹೊಗಳಿಸಿಕೊಂಡಿರುವ ಕೈಫಿಯತ್ತುಗಳ ಕಡೆಗೆ ಸಂಶೋಧಕರ ಗಮನ ಸೆಳೆಯುವುದು ಈ ಪುಸ್ತಕದ ಪ್ರಧಾನ ಉದ್ದೇಶವಾಗಿದೆ.

ಕೃತಿಯ ಪರಿವಿಡಿಯಲ್ಲಿ ಕೈಫಿಯತ್ತುಗಳ ಪರಿಚಯ, ಕೈಫಿಯತ್ತುಗಳು ಮತ್ತು ಇತರ ದಾಖಲೆಗಳು, ಕೈಫಿಯತ್ತುಗಳ ಕಾಲ ಮತ್ತು ಬರೆದವರು,ಕೈಫಿಯತ್ತುಗಳ ಸಂಗ್ರಹ ಮತ್ತು ಸಂರಕ್ಷಣೆ, ಕೈಫಿಯತ್ತುಗಳ ವರ್ಗೀಕರಣ, ಕೈಫಿಯತ್ತುಗಳ ಉದ್ದೇಶ ಮತ್ತು ಸ್ವರೂಪ, ಕೈಫಿಯತ್ತುಗಳ ಮಹತ್ವ, ಕೈಫಿಯತ್ತುಗಳ ಭಾಷೆ , ಸಮಾರೋಪ ಎಂಬ ಶೀರ್ಷಿಕೆಗಳ ಬರಹಗಳಿವೆ.

About the Author

ಪುರುಷೋತ್ತಮ ಬಿಳಿಮಲೆ
(21 August 1955)

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ...

READ MORE

Reviews

https://www.prajavani.net/artculture/book-review/kannada-literature-kaifiyattu-kannada-book-review-1024614.html

 

Related Books