ಇಮ್ಮಡಿ ಹರಿಹರನ ಶಾಸನಗಳು

Author : ಸ.ಚಿ. ರಮೇಶ

Pages 1098

₹ 1000.00




Year of Publication: 2023
Published by: ಪ್ರಸಾರಾಂಗ, ಹಂಪಿ
Address: ವಿದ್ಯಾರಣ್ಯ, ಹೊಸಪೇಟೆ, ಹಂಪಿ, ಕರ್ನಾಟಕ- 583276
Phone: 083942 41337

Synopsys

‘ಇಮ್ಮಡಿ ಹರಿಹರನ ಶಾಸನಗಳು’ ಎಸ್. ನಾಗರಾಜಪ್ಪ ಅವರು ಸಂಪಾದಿಸಿರುವ ಕೃತಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಚರಿತ್ರೆ ಅನೇಕ ಕೌತುಕ ಮತ್ತು ಕುತೂಹಲಗಳಿಗೆ ಸಾಕ್ಷಿಯಾಗಿದೆ. ಇದು ಸಾಮ್ರಾಜ್ಯದ ಎಲ್ಲ ಆಯಾಮಗಳಿಗೆ ಅನ್ವಯಿಸುವ ಮಾತು. ಇದನ್ನು ಸಂಗಮ ಸಾಳುವ, ತುಳುವ ಮತ್ತು ಅರವೀಡು ಮನೆತನಗಳು ಆಳ್ವಿಕೆ ನಡೆಸಿದವು. ವಿಜಯನಗರ ಸಾಮ್ರಾಜ್ಯದ ಇತಿಹಾಸವೆಂದರೆ ಕೃಷ್ಣದೇವರಾಯರ ಇತಿಹಾಸ ಎನ್ನುವುದು ಒಂದೆಡೆಯಾದರೆ, ಸಂಗಮ ಮನೆತನ ಎಂದ ತಕ್ಷಣ ಎಲ್ಲರೂ ನೆನಪಿಸಿಕೊಳ್ಳುವುದು ಇಮ್ಮಡಿ ದೇವರಾಯನನ್ನು ಮಾತ್ರ. ಇಮ್ಮಡಿ ದೇವರಾಯನಿಗಿಂತಲೂ ಪೂರ್ವದಲ್ಲಿ ಅನೇಕ ದೊರೆಗಳು ಆಳಿರುವುದನ್ನು ವಿದ್ವಾಂಸರ ಸಹಿತ ಎಲ್ಲರೂ ಮರೆತೇ ಬಿಡುತ್ತಾರೆ. ವಾಸ್ತವವಾಗಿ ಇಮ್ಮಡಿ ದೇವರಾಯನಿಗಿಂತ ಮೊದಲು ವಿಶಾಲವಾದ ಸಾಮ್ರಾಜ್ಯ ಸ್ಥಾಪನೆಗೆ ಪಣತೊಟ್ಟು, ಆ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿ, ಆಂದ್ರಪ್ರದೇಶದಲ್ಲಿನ ಗೋದಾವರೀ ನದಿಯವರೆಗೆ ತನ್ನ ದಂಡಯಾತ್ರೆಯನ್ನು ಕೈಕೊಂಡು ಯಶಸ್ವಿಯಾದವನು ಇಮ್ಮಡಿ ಹರಿಹರ. ಇಂತಹ ದೂರದೃಷ್ಟಿಯ ಮತ್ತು ಜನಾನುರಾಗಿ ಅರಸನ ಎಲ್ಲ ಶಾಸನಗಳನ್ನು ಒಂದೆಡೆ ತರುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಿದ್ದಾರೆ.

About the Author

ಸ.ಚಿ. ರಮೇಶ
(24 February 1961)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಸ.ಚಿ. ರಮೇಶ್ ಅವರು ಜಾನಪದ ವಿದ್ವಾಂಸರಲ್ಲಿ ಒಬ್ಬರು. ಡಾ.ಎಸ್.ಎಚ್ ರಮೇಶ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ, ಜಾನಪದ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್, ಪಿಎಚ್.ಡಿ ಪದವಿ ಪಡೆದಿದ್ದಾರೆ. ಜಾನಪದ ಸಾಹಿತ್ಯ, ಕನ್ನಡ ಸಾಹಿತ್ಯ, ಪರಿಸರ ಚಿಂತನೆ, ಪಾರಂಪರಿಕ ಕೃಷಿ  ಅವರ ಅಸಕ್ತಿಯ ಕ್ಷೇತ್ರಗಳು. ಜಾನಪದ ಕರ್ನಾಟಕ ಸಂಪುಟ-3, ಸಂಚಿಕೆ-1, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, (2004),   ಮಾಟ–ಮಂತ್ರ–ಮೋಡಿ,   ಅಲೆಮಾರಿಗಳ ಸ್ಥಿತಿಗತಿ, ನೀರು : ಒಂದು ಜಾನಪದ ನೋಟ,ದಕ್ಷಿಣ ಭಾರತೀಯ ಜಾನಪದ ಕೋಶ, ಸಂಪುಟ-2 ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವರಾಗಿ (ಮೌಲ್ಯಮಾಪನ)  ಕಾರ್ಯ ನಿರ್ವಹಿಸಿದ ಅವರು ಕರ್ನಾಟಕ ವಸ್ತು ಸಂಗ್ರಹಾಲಯ, ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ...

READ MORE

Related Books