ಶೋಧ

Author : ಸಿ.ಎನ್. ರಾಮಚಂದ್ರನ್

Pages 50

₹ 72.00




Published by: ಅಂಕಿತ ಪುಸ್ತಕ
Address: #53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮೈನ್ ರೋಡ್, ಅನಿಕಾರ್ ಟೆಕ್ಸ್ಟೆಲ್ಸ್, ಬಸವನಗುಡಿ ಬೆಂಗಳೂರು ಕರ್ನಾಟಕ-560004
Phone: 08026617100

Synopsys

‘ಶೋಧ’ ಕೃತಿಯು ಸಿ.ಎನ್.ರಾಮಚಂದ್ರನ್ ಅವರ ಕಾದಂಬರಿಯಾಗಿದೆ. ಕೃತಿಯ ಕುರಿತು ಶಾಂತಿನಾಥ ದೇಸಾಯಿ ಅವರು, ಸೋಮಾಲಿಯಾದಲ್ಲಿರುವ ಭಾರತೀಯರ ಸಂದಿಗ್ಧ ಪರಿಸ್ಥಿತಿ ಹಾಗೂ ಭಾರತೀಯರೇ ನಿರ್ಮಿಸಿದ ಶೋಷಣೆಯ ವಿಚಿತ್ರ ವಾತಾವರಣ ಇವುಗಳಲ್ಲಿ ಸಿಕ್ಕು ತೊಳಲಾಡುವ ಶೋಧದ ನಾಯಕ ಆಧುನಿಕ ಸಾಹಿತ್ಯ ಪರಂಪರೆಯಲ್ಲಿ ಮೂಡಿಬಂದ ಅನಾಥ ಪ್ರಜ್ಞೆಯ ಪ್ರತಿನಿಧಿ. ಭಾರತೀಯ ಸಂಸ್ಕೃತಿಯ;ಲ್ಲಿರುವ ವಿರೋಧಾಭಾಸಗಳು ಪರದೇಶದಲ್ಲಿರುವ ಭಾರತೀಯರ ಜೀವನದಲ್ಲಿ ಅತ್ಯಂತ ತೀಕ್ಷ್ಣ ಹಾಗೂ ನಾಟಕೀಯವಾಗಿ ಅಭಿವ್ಯಕ್ತಿಗೊಳ್ಳುವ ರೀತಿಯನ್ನು ರಾಮಚಂದ್ರನ್ ಅವರು ಈ ಕಾದಂಬರಿಯಲ್ಲಿ ಕಲಾತ್ಮಕವಾಗಿ ಹಿಡಿದಿಟ್ಟಿದ್ದಾರೆ ಎಂದಿದ್ದಾರೆ.

About the Author

ಸಿ.ಎನ್. ರಾಮಚಂದ್ರನ್

ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...

READ MORE

Related Books