ಆಚಾರ್ಯ ನರೇಂದ್ರ ದೇವ ಅವರ ಸಮಾಜವಾದಿ ವಿಚಾರಧಾರೆ

Author : ಹನುಮಂತ

Pages 242

₹ 125.00




Year of Publication: 2016
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560059
Phone: 91 - 23183311, 23183312

Synopsys

ಭಾರತಕ್ಕೆ ಸ್ವಾತಂತ್ರ ಲಭಿಸುವುದು ಎಷ್ಟು ಮುಖ್ಯವೋ, ಅದರ ಜೊತೆಗೆ ಜನರು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರಗಳನ್ನು ಪಡೆದು ಆರೋಗ್ಯಕರ ಸಮಾಜವಾದಿ ಸಮಾಜದಲ್ಲಿ ಬದುಕಬೇಕು ಎನ್ನುವುದು ನರೇಂದ್ರ ಅವರ ಅಶಯ. ರೈತವರ್ಗದ ಕ್ರಾಂತಿಯನ್ನು ಗುರುತಿಸಿ, ತಳಸ್ತರದ ಸಾಮಾಜಿಕ ಕ್ರಾಂತಿಯ ಕನಸನ್ನು ಜನಸಮಾನ್ಯರಲ್ಲಿ ಬಿತ್ತಿವಲ್ಲಿ ಪ್ರಯತ್ನಿಸಿದರು. ಜನತಂತ್ರ ಅಧ್ಯಾಯದಲ್ಲಿ ಪಂಚಾಯತ್‌ ರಾಜ್‌ನ ಪರಿಣಾಮಕಾರಿ ಕ್ರಮದ ಕುರಿತಂತೆ ಬರೆಯುತ್ತಾರೆ. ಸ್ವಾತಂತ್ರದ ಪರಿಭಾವನೆ, ಜಾತಿ ಪದ್ಧತಿ ಹೇಗೆ ಜನತಂತ್ರವನ್ನು ನಿಯಂತ್ರಿಸುತ್ತಿವೆ ಎನ್ನುವುದನ್ನು ವಿವರಿಸಿದ್ದಾರೆ.ಜನತೆಯಲ್ಲಿ ಮೌಲ್ಯಗಳ ಹೊಸ ಪ್ರಜ್ಞೆಯನ್ನು ಬಿತ್ತುವುದರಿಂದ, ಈಗಿರುವ ಸಾಮಾಜಿಕ ವ್ಯವಸ್ಥೆಯನ್ನು ಕ್ರಾಂತಿಕಾರಿಯನ್ನಾಗಿ ಮಾಡುವುದರಿಂದ, ಒಂದೇ ಜನಾಂಗ ಹಾಗೂ ಸೋದರತನ ಎಂಬ ವಿಚಾರಗಳನ್ನು ಬೆಳೆಸುವುದರಿಂದ ಹಾಲಿ ಇರುವ ಅಸಮಾನತೆಗಳನ್ನು, ಅವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಹಾಗೂ ಬುಡಸಹಿತ ಕಿತ್ತು ಹಾಕಬಹುದು ಎಂಬ ಆಚಾರ್ಯ ನರೇಂದ್ರ ದೇವ ಅವರುಈ ಕೃತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Books