ಚಾರ್ವಾಕನಿಂದ ಮಾರ್ಕ್ಸ್‌‌ವರೆಗೆ

Author : ಚಂದ್ರಕಾಂತ ಪೋಕಳೆ

Pages 125

₹ 70.00




Year of Publication: 2009
Published by: ಕ್ರಿಯಾ ಪ್ರಕಾಶನ
Address: ಸಂ. 40, ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027

Synopsys

ಭಾರತೀಯ ತತ್ವಜ್ಞಾನ-ಚಿಂತನೆಯಲ್ಲಿ ಪ್ರಮುಖನಾದ ಚಾರ್ವಾಕ ಮುನಿ ನಾಸ್ತಿಕವಾದ ಪ್ರತಿಪಾದಿಸಿದ, ಅವನಿಗೆ ಆಧ್ಯಾತ್ಮಕ್ಕಿಂತ ಬದುಕು ಮುಖ್ಯವಾಗಿತ್ತು. ಚಾರ್ವಾಕ ತತ್ವಜ್ಞಾನ ಮತ್ತು ಆಧುನಿಕ ಬದುಕಿನ ಆಲೋಚನಾ ಕ್ರಮವನ್ನೇ ಬದಲಿಸಿದ ಚಿಂತಕ ಮಾರ್ಕ್ಸ್‌ ಇವೆರಡನ್ನೂ ಅಕ್ಕಪಕ್ಕದಲ್ಲಿಟ್ಟು ಚಿಂತಿಸಿದ ಅಪರೂಪದ ಕೃತಿ.

ತತ್ವಶಾಸ್ತ್ರಜ್ಞರು ಇದುವರೆಗೆ ಜಗತ್ತಿನ ವ್ಯಾಖ್ಯಾನ ಮಾಡಿದ್ದಾರಷ್ಟೇ, ನಮ್ಮ ಮುಂದಿರುವುದು ಜಗತ್ತನ್ನು ಬದಲಿಸುವುದು ಹೇಗೆ ಎಂಬ ಪ್ರಶ್ನೆ- ಹೀಗೆಂದ ಕಾರ್ಲ್‌ ಮಾಕ್ಸ್‌ ನುಡಿ ಈ ಹಿಂದೆ ಹಲವರನ್ನು ಪ್ರೇರೇಪಿಸಿದೆ. ಈಗಲೂ ಪ್ರೇರೇಪಿಸುತ್ತಿದೆ. ಬಹುಪಾಲು ಜನರಿಗೆ ಜಗತ್ತು ಅಮಾನವೀಯವಾಗಿರುವ ವರೆಗೆ ಇದನ್ನು ನಾವು ಬದಲಿಸುವುದು ಹೇಗೆ ಎಂಬುದೇ ನಮ್ಮ ನಿಜವಾದ ಕಾಳಜಿ. ಜಗತ್ತನ್ನು ಬದಲಿಸಲು ಕಟಿಬದ್ಧರಾಗಿ ಅರ್ಧಶತಮಾನಕ್ಕು ಹೆಚ್ಚು ಕಾಲ ಈ ಧ್ಯೇಯಸಾಧನೆಗೆ ಶ್ರಮಿಸಿದ ಪ್ರಭಾಕರ ಸಂಝಗಿರಿ ಅವರ ಈ ಕೃತಿಯನ್ನು ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸದ್ದಾರೆ.

 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books