
ಲೇಖಕ -ಅನುವಾದಕ ಪ.ರಾ. ಕೃಷ್ಣಮೂರ್ತಿ ಅವರು ಓಶೋ ಅವರ ‘ಪ್ರೀತಿಯಲ್ಲಿ...’ಎಂಬ ಕೃತಿಯ ಚಿಂತನೆಗಳನ್ನುಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಅಧ್ಯಾತ್ಮ ಗುರು ಎಂದೇ ಖ್ಯಾತಿಯ ಓಶೋ ಅವರು ಹತ್ತು ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಚಿಂತಿಸಿದವರ ಪೈಕಿ ಪ್ರಮುಖರು. ಇವರ ಮುಕ್ತ ಚಿಂತನೆಗಳು ವಿಶೇಷವಾಗಿ ಯುವ ಜನತೆಯನ್ನು ಸೆಳೆದಿವೆ. ದೊಡ್ಡವರೂ ಸಹ ಇವರ ಚಿಂತನೆಯತ್ತ ವಾಲಿರುವುದು ಆ ಚಿಂತನೆಗಳಲ್ಲಿರುವ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುವಂತಿವೆ. ಮನುಷ್ಯ ಭಯಮುಕ್ತವಾಗಿ ಚಿಂತನೆ ನಡೆಸಬೇಕು ಮತ್ತು ಅರಿವಿನಿಂದ ಪ್ರೀತಿಸಿ ಸಂಬಂಧಗಳನ್ನು ಉಳಿಸಿಕೊಳ್ಳಬೇಕು ಎಂಬ ಉಪಶೀರ್ಷಿಕೆಯಡಿ ಕೃತಿ ಪ್ರಕಟಗೊಂಡಿದೆ.
©2025 Book Brahma Private Limited.