ಪ್ರಾಚೀನ ಭಾರತದಲ್ಲಿ ದಾರ್ಶನಿಕ ಸಂಘರ್ಷ ಮತ್ತು ಅದರ ಸಾಮಾಜಿಕ ಮಹತ್ವ

Author : ಕೆ.ಎಲ್. ಗೋಪಾಲಕೃಷ್ಣ ರಾವ್

Pages 72

₹ 30.00




Year of Publication: 2001
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಪ್ರಾಚೀನ ಭಾರತದಲ್ಲಿ ದಾರ್ಶನಿಕ ಸಂಘರ್ಷ ಮತ್ತು ಅದರ ಸಾಮಾಜಿಕ ಮಹತ್ವ’ ಎಸ್‌.ಜಿ.ಸರ್ದೇಸಾಯಿ ಅವರ ಮೂಲ ಕೃತಿಯಾಗಿದೆ. ಕನ್ನಡಕ್ಕೆ ಕೆ.ಎಲ್. ಗೋಪಾಲಕೃಷ್ಣ ರಾವ್ ಅನುವಾದಿತ ಕೃತಿಯಾಗಿದೆ. ಭಾರತದಲ್ಲಿ ತತ್ವಶಾಸ್ತ್ರವನ್ನು ಧಾರ್ಮಿಕ ನಂಬುಗೆಗಳಿಂದ ಬೇರ್ಪಡಿಸಿ ವೈಚಾರಿಕ ತಿಳಿವನ್ನು ಮೂಡಿಸಲು ಬಹುವಾಗಿ ಹೆಣಗಿದ್ದು ಲೋಕಾಯತರ ಬಹು ದೊಡ್ಡ ಸಾಧನೆ. ವಿತ್ತಂಡವಾದ - ಪಂಥೀಯ ಗೊಂದಲಗಳಿಂದ ಘರ್ಷಣೆಗಳೇರ್ಪಡುತ್ತಿದ್ದುದನ್ನು ವಿದ್ವಾಂಸ ಸರ್ದೇಸಾಯಿ ವಿವರಿಸಿದ್ದಾರೆ.

About the Author

ಕೆ.ಎಲ್. ಗೋಪಾಲಕೃಷ್ಣ ರಾವ್

ಕೆ.ಎಲ್. ಗೋಪಾಲಕೃಷ್ಣರಾವ್ ಅವರು ಮೂಲತಃ ಬೆಂಗಳೂರಿನವರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ವ್ಯಾಸಂಗ ಮಾಡಿದ್ದರು. ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, ನೀನಾಸಂ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಸಹಪಾಠಿಯೂ ಆಗಿದ್ದರು. ಕಲಾವಿದ ಆರ್.ಎಸ್. ನಾಯ್ಡು ಹಾಗೂ ಲೇಖಕ ನಿರಂಜನ ಅವರ ನಿಕಟ ಸಂಪರ್ಕವೂ ಇವರಿಗಿತ್ತು. ರಷ್ಯಾದ ರಾಜಧಾನಿ ಮಾಸ್ಕೊದ ರಾದುಗ ಪ್ರಕಾಶನ ಸಂಸ್ಥೆಯಲ್ಲಿ ಕನ್ನಡ ಅನುವಾದಕರಾಗಿ 17ವರ್ಷ ಕರ್ತವ್ಯ ನಿರ್ವಹಿಸಿದ್ದರು. ಪ್ರಪಂಚದ ಪ್ರಮುಖ ವಿದ್ಯಮಾನಗಳ ಕುರಿತು ವಿಶ್ವದರ್ಶನ ಶೀರ್ಷಿಕೆಯಡಿ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು. 1950ರ ದಶಕದಲ್ಲಿ ಸೋವಿಯತ್ ದೇಶ ಪತ್ರಿಕೆಯಲ್ಲೂ ಕೆಲವು ಕಾಲ ಕರ್ತವ್ಯ ನಿರ್ವಹಿಸಿದ್ದರು. ನವಕರ್ನಾಟಕ ಪ್ರಕಾಶನ ...

READ MORE

Reviews

ಹೊಸತು -ಡಿಸೆಂಬರ್‌-2002

ಪ್ರಾಚೀನ ಭಾರತದ ಹೆಚ್ಚಿನ ತತ್ವಜ್ಞಾನಿಗಳೆಲ್ಲ ಭೌತಿಕ ವಾದಕ್ಕೆ ಬದ್ಧರೂ ಭಾವನಾವಾದದ ವಿರೋಧಿಗಳೂ ಆಗಿದ್ದರೂ ಸಹ ವೇದಾಂತವೇ ಏಕೆ ಪ್ರಬಲ ತತ್ವಶಾಸ್ತ್ರವಾಗಿ ಉಳಿದುಕೊಂಡಿತೆಂಬ ಪ್ರಶ್ನೆಗೆ ಸಹಜವಾಗಿ ವೈದಿಕ ಪುರೋಹಿತಶಾಹಿಯತ್ತ ಗಮನ ಹರಿಯುತ್ತದೆ. ಭಾರತದಲ್ಲಿ ತತ್ವಶಾಸ್ತ್ರವನ್ನು ಧಾರ್ಮಿಕ ನಂಬುಗೆಗಳಿಂದ ಬೇರ್ಪಡಿಸಿ ವೈಚಾರಿಕ ತಿಳಿವನ್ನು ಮೂಡಿಸಲು ಬಹುವಾಗಿ ಹೆಣಗಿದ್ದು ಲೋಕಾಯತರ ಬಹು ದೊಡ್ಡ ಸಾಧನೆ. ಇತ್ತಂಡವಾದ - ಪಂಥೀಯ ಗೊಂದಲಗಳಿಂದ ಘರ್ಷಣೆಗಳೇರ್ಪಡುತ್ತಿದ್ದುದನ್ನು ವಿದ್ವಾಂಸ ಸರ್ದಸಾಯಿ ವಿವರಿಸಿದ್ದಾರೆ.

Related Books