
ಮೋಹನದಾಸ್ ಕರಮ್ ಚಂದ್ ಗಾಂಧಿ (ಮಹಾತ್ಮ ಗಾಂಧೀಜಿ) ಅವರು ಬರೆದ ಕೃತಿ-ಹಿಂದ್ ಸ್ವರಾಜ್ಯ. ಈ ಕೃತಿಯನ್ನು ಹಿರಿಯ ಲೇಖಕ -ಗಾಂಧಿವಾದಿ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಸಾಮರ್ಥ್ಯ ಎಂದರೆ ಗ್ರಾಮೀಣ ಜನ-ಸಂಸ್ಕೃತಿ, ಕಲೆ, ಸಾಹಿತ್ಯ ಇತ್ಯಾದಿ. ಭಾರತೀಯತೆಯ ಘನತೆ-ಗೌರವಗಳನ್ನು ಎತ್ತಿ ಹಿಡಿಯುವ ವಿಚಾರಗಳನ್ನು ಗಾಂಧೀಜಿ ಅವರು ಇಲ್ಲಿ ವ್ಯಕ್ತಪಡಿಸಿದ್ದಾರೆ. ಎಲ್ಲ ಜಾತಿ ಧರ್ಮ ವಿಶೇಷತೆಗಳನ್ನು ಒಳಗೊಂಡ ಭಾರತವು ತನ್ನ ವೈವಿಧ್ಯತೆಯೊಂದಿಗೆ ವಿಶ್ವದ ಗಮನ ಸೆಳೆದಿದೆ. ವಿಶ್ವದ ಯಾವ ಮೂಲೆಯಲ್ಲೂ ಇಂತಹ ದೇಶವಿಲ್ಲ. ಆದ್ದರಿಂದ, ವೈವಿಧ್ಯತೆಯಲ್ಲೂ ಭಾರತವು ಏಕತೆಯನ್ನು ಒಳಗೊಂಡಿದ್ದು, ಐಕ್ಯತೆಯೂ ಮೆರೆದಿದೆ. ಸಮಾಜದ ಸಾಮರಸ್ಯವು ಇಡೀ ದೇಶದ ಸುವ್ಯವಸ್ಥೆಯು ಆಗಿದೆ ಎಂಬ ಅಂಶಗಳನ್ನು ಗಾಂಧೀಜಿ ಅವರು ತುಂಬಾ ಅಭಿಮಾನದೊಂದಿಗೆ ಹೇಳಿಕೊಂಡಿದ್ದಾರೆ.
©2025 Book Brahma Private Limited.