ಅನ್ ಟು ದಿಸ್ ಲಾಸ್ಟ್

Author : ಜಿ.ಎಂ. ಕೃಷ್ಣಮೂರ್ತಿ

Pages 195

₹ 100.00




Year of Publication: 2004
Published by: ಕಾಮಧೇನು ಪುಸ್ತಕ ಭವನ
Address: ನಾಗಪ್ಪ ಬೀದಿ, ಶೇಷಾದ್ರಿಪುರಂ, ಬೆಂಗಳೂರು

Synopsys

ಮಹಾತ್ಮಗಾಂಧೀಜಿ ಅವರ ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿದ ಪುಸ್ತಕ ಎನ್ನಲಾದ ಹಾಗೂ ಜಾನ್ ರಸ್ಕಿನ್ ಅವರು ಬರೆದ ‘ಅನ್ ಟು ದಿಸ್ ಲಾಸ್ಟ್’ ಅನ್ನು ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ, ಧರ್ಮ, ವಿಜ್ಞಾನ, ಮಾನವೀಯತೆ, ಸಾಮಾನ್ಯ ಚಿಂತನೆಗಳ ಸ್ವರೂಪ-ಸ್ವಭಾವಗಳನ್ನು ಕುರಿತು ವಿವರಿಸಿದ್ದು, ಮನುಷ್ಯನಾಗಿ ಜನ್ಮ ತಳೆದ ಮೇಲೆ ಅಳವಡಿಸಿಕೊಳ್ಳಬೇಕಿರುವ ಕನಿಷ್ಟ ಗುಣಗಳ ಕುರಿತು ಹೃದಯಂಗಮವಾಗಿ ಈ ಕೃತಿ ಬಿಂಬಿಸುತ್ತದೆ.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books