
ದೇವರ ಅಸ್ತಿತ್ವ ಮತ್ತು ಮಾನವನ ಅಂತಃಶಕ್ತಿಯ ಸಂಘರ್ಷಕ್ಕೆ ವ್ಯಕ್ತಿತ್ವ ವಿಕಸನದ ಅಂಶಗಳನ್ನು ಸೇರಿಸಿ ಸಸ್ಪೆನ್ಸ್ ಕಾದಂಬರಿಯಲ್ಲಿ ಓದುಗರಿಗೆ ಬೇಸರವಾಗದ ರೀತಿ ಹೆಣೆದಿದ್ದಾರೆ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ. ದೇವರಿಗೇ ಸವಾಲು ಹಾಕುವ ಕತಾ ನಾಯಕ ಕಲ್ಕಿ ಗೆಲ್ಲುತ್ತಾನಾ? ಸೋಲುತ್ತಾನಾ? ಅವ ದೇವರಿಗೆ ಹಾಕಿದ ಸವಾಲಾದರೂ ಏನು? ತಾನು ಗೆಲ್ಲಲು ಬುದ್ಧಿವಂತೆ ಸೌಪರ್ಣಿಕಾಳನ್ನು ಎಂತಹ ತಪ್ಪು ಮಾಡಲು ಪ್ರೇರೇಪಿಸಿದ? ಎಂಬ ಕುತೂಹಲಕಾರಿ ಪ್ರಶ್ನೆಗಳು ಕಾದಂಬರಿಯನ್ನು ಓದಿಸಿಕೊಂಡು ಹೋಗುತ್ತದೆ. ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ ಸಂಡೂರು ವೆಂಕಟೇಶ್.
©2025 Book Brahma Private Limited.