ವಿಮೋಚನಾ ಸಮರವೆಂಬ ಪಿತೂರಿಯು

Author : ಕೆ. ಪ್ರಭಾಕರನ್

Pages 404

₹ 480.00




Year of Publication: 2023
Published by: ಕ್ರಿಯಾ ಮಾದ್ಯಮ ಪ್ರೈ. ಲಿಮಿಟೆಡ್
Address: #37 ಎ, 4ನೇ ಕ್ರಾಸ್, ಮಹಾಲಕ್ಷ್ಮೀ ಲೇಔಟ್, ಬೆಂಗಳೂರು-560027

Synopsys

ವಿಮೋಚನಾ ಸಮರವೆಂಬ ಪಿತೂರಿಯು ಕೆ. ಪ್ರಭಾಕರನ್‌ ಅವರ ಅನುವಾದಿತ ಕೃತಿಯಾಗಿದೆ. 1957ರ ಏಪ್ರಿಲ್ 5 ರಂದು ಕೇರಳದಲ್ಲಿ ಇಎಂಎಸ್‌ ನಂಬೂದ್ರಿಪಾದ ನಾಯಕತ್ವದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರದಲ್ಲಿ ವಿಶ್ವಾದ್ಯಂತ ದೊಡ್ಡ ಸುದ್ದಿ. ಆಮೇರಿಕ, ಯುರೋಏಗಳ ಉರ್ಪುರೇಶ ಪ್ರಭುಗಳಿಗೆ ಆಶ್ಚರ್ಯವಾಗುವುದು ಸಹಜ ಆದರೆ ಆಘಾಶ, ಭಯ, ಆಶಂಕೆಗಳು ಉಂಟಾದವು, ಅಷ್ಟೇ ಅಲ್ಲ ಕ್ಯಾಥೋಲಿಕ್ ಚರ್ಚನ ಪೋವರೂ ಸೇರಿದಂತೆ ಕೇರಳದ ಧರ್ಮಾಧಿಕಾರಿಗಳಿಗೆ, ಭಾರತದಲ್ಲಿ ಅಂದು ಆಳುತ್ತಿದ್ದ ಕಾಂಗ್ರೆಸ್‌ ನಾಯಕರಿಗೆ, ಕೇರಳದ ಪ್ಲಾಂಟೇಷನ್‌ ಒಡೆಯರಿಗೆ, ದೊಡ್ಡ ದೊಡ್ಡ ಭೂಮಾಲೀಕರಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಡೆಯರಿಗೆ ಇವರಿಗೆಲ್ಲ ಭಯ ಆತಂಕಗಳು ಉಂಟಾದವು. ಈ ಅನೇಕ ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಶಕ್ತಿಗಳು ಜೊತೆಗೂಡಿ 'ಪವಿತ್ರ ಕೂಟ ರಚಿಸಿ ಕೇರಳದ ಕಮ್ಯುನಿಸ್ಟ್ ಸ0ಭವನ್ನು ಕಿತ್ತೊಗೆಯಲು ಇನ್ನಿಲ್ಲದ ಪಯತ್ನ ನಡೆಸಿದವು. ಕೃತಿಯಲ್ಲಿ ಈ ಪ್ರಕ್ರಿಯೆಗಳನ್ನು ವಸ್ತುನಿಷ್ಠವಾಗಿ ವಿವರಿಸಲಾಗಿದೆ ಮತ್ತು ವಿಶ್ಲೇಷಿಸಲಾಗಿದೆ. ಕೃತಿಕಾರರಾದ ಪಿ.ಎಂ.ಸಲೀಂರವರ ಶ್ರಮ ಸೇರಿತವಾದ ಆಕರಗಳ ಅಧ್ಯಯನ, ವಸ್ತುನಿಷ್ಠ ವಿಶ್ಲೇಷಣೆಯಿಂದ ಈ ಸಂಶೋಧನೆ ಬಹಳ ಉಪಯುಕ್ತವಾದ ಕೃತಿಯಾಗಿದೆ. ವಿಶ್ವ ಮಟ್ಟದ ಪವಿತ್ರ ಕೂಟ' ಕೇರಳದಲ್ಲಿ ಪವಿತ್ರ ಕೂಟ ಕಟ್ಟಿದ ಬಗೆ ಮತ್ತವರ ಕಾರ್ಯದ ಬಗ್ಗೆ ಪುಸ್ತಕದಲ್ಲಿ ವಿವರವಾಗಿ ಚಿತ್ರಿಸಲಾಗಿದೆ. ಈ ಕೂಟ ಕಟ್ಟುವ ಕ್ರಿಯೆಯಲ್ಲಿ ಪಧಾನ ಸಾತ್ರ ವಹಿಸಿದ್ದ ಕಥೊಲಿಕ್‌ ಚರ್ಚ್ ಮತ್ತು ಕಾಂಗ್ರೆಸ್‌ ಎಂಬುದನ್ನು ವಿವರಿಸಿದೆ. ಕಮ್ಯುನಿಸ್ಟ್ ಸರ್ಕಾರವನ್ನು ಕಿತ್ತೊಗೆದ ಎರಡು ದಶಕಗಳ ನಂತರ ಬೆಳಕಿಗೆ ಬಂದದ್ದು ಅಮೇರಿಕದ ಸರ್ಕಾರದ ಪಾತ್ರ. 1959, ರ ಕೇರಳದ ಮೊದಲ ಕಮ್ಯುನಿಸ್ಟ್ ಸರ್ಕಾರದ ವಜಾ ನಂತರ ಅಮೆರಿಕ ಸರ್ಕಾರದ ಮತ್ತು ಕಾರ್ಪೊರೇಟ್‌ಗಳಲ್ಲಿ ಹಾಗೂ ಕ್ಯಾಥೊಲಿಕ್ಖರಲ್ಲಿ ಭಾರತದಲ್ಲಿ ಕಮ್ಯುನಿಸ್ಟರನ್ನು ಅಡಗಿಸಿ ಬಿಟ್ಟೆವು ಎಂಬ ಸಾಧನೆಯ ಹರುಷ ತುಂಬಿ ತುಳುಕಿತ್ತೇನೋ ಗೊತ್ತಿಲ್ಲ. ಆದರೆ ಮುಂದೇನಾಯಿತು? 1960ರಲ್ಲಿ ಅದರ ರಚನೆಯ ನಂತರದ ದಶಕಗಳಲ್ಲಿ ಕೇರಳದಲ್ಲಿ ಆರು ಬಾರಿ ಎಡ ಪ್ರಜಾಪ್ರಭುತ್ವ ರಂಗ ಚುನಾಯಿತವಾಗಿ ಸರ್ಕಾರ ನಡೆಸಿದೆ. ಕೇರಳದ ಚುನಾವಣಾ ರಂಗದಲ್ಲಿ 2021ರಲ್ಲಿ ಎರಡನೇ ಬಾರಿಗೆ ಎಲ್.ಡಿ.ಎಫ್. ಮತ್ತೆ ಜಯಗಳಿಸಿದ್ದು ಮತ್ತೊಂದು ದಾಖಲೆ. ಎಡಪಂಥೀಯ ಸರ್ಕಾರಕ್ಕೆ ಮತ್ತು ರಾಜಕಾರಣಕ್ಕೆ ದೊಡ್ಡ ಸವಾಲುಗಳನ್ನು ಒಡಲಾಗುತ್ತಿದೆ. ಎಲ್ಲ ದಿಕ್ಕುಗಳಿಂದಲೂ ಕಮ್ಯುನಿಸ್ಟ್ ಸರ್ಕಾರವನ್ನು ಮುತ್ತುವ ಪವಿತ್ರ ಕೂಟ'ಗಳು ಹೊಸ ಸನ್ನಿವೇಶಗಳಲ್ಲಿ ಹೊಸ ಹೊಸದಾಗಿ ರಚನೆಯಾಗುತ್ತಲೇ ಇವೆ. ಈ ಸಂದರ್ಭದಲ್ಲಿ ಈ ಕೃತಿಯು ಅತ್ಯಂತ ಪ್ರಸ್ತುತವಾಗಿದೆ. ಜಿ.ಎನ್ ನಾಗರಾಜ್‌ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕೆ. ಪ್ರಭಾಕರನ್
(26 April 1957)

ವೃತ್ತಿಯಿಂದ ಎಂಜಿನಿಯರ್‌ ಆಗಿರುವ ಕೆ. ಪ್ರಭಾಕರನ್‌ ಅವರು ಮೆಸ್ಕಾಮ್‌ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ)ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದರು (2014ರ ವರೆಗೆ). ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಸದ್ಯ ಶಿವಮೊಗ್ಗ ನಿವಾಸಿ. ಸಾಹಿತ್ಸಯ ಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಲೆಯಾಳಂನಿಂದ ’ಕನಸನೂರಿನ ಕಿಟ್ಟಣ್ಣ’ ಕೃತಿಯನ್ನು ಕನ್ನಡೀಕರಿಸಿದ್ದಾರೆ. ...

READ MORE

Related Books