ದೇವರು ದೆವ್ವ ವಿಜ್ಞಾನ

Author : ಪುರುಷೋತ್ತಮ ಬಿಳಿಮಲೆ

Pages 176

₹ 100.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು
Phone: 08022203580

Synopsys

ನಂಬಿಕೆ, ಮೂಢನಂಬಿಕೆಗಳ ನಡುವೆ ಸಿಕ್ಕು ಜನರು ಮೌಢ್ಯದ ದಾಸರಾಗುತ್ತಿದ್ದಾರೆ. ವಿಜ್ಞಾನ ಮುಂದುವರೆದಿರುವ ಇಂದಿನ ಕಾಲದಲ್ಲಿಯೂ ನಿಧಿ ಸಿಗುತ್ತದೆ ಎಂದು ಹೇಳಿ ಮಕ್ಕಳನ್ನು ಬಲಿಕೊಡುವ ಅನಾಚಾರ ಪದ್ಧತಿ ಈಗಲೂ ಭಾರತದಲ್ಲಿ ಚಾಲ್ತಿಯಲ್ಲಿದೆ. ದೇವರ ಹೆಸರಿನಲ್ಲಿ ನಡೆಯುವ ಮಡೆಸ್ನಾನ, ಕೂದಲು ತಿನ್ನುವ ಪದ್ದತಿ, ಎಳೆಗೂಸುಗಳನ್ನು ಮೇಲಿಂದ ಬಿಸಾಕುವಂತಹ ಅವೈಜ್ಞಾನಿಕ ಘಟನೆಗಳು ನಡೆಯುತ್ತಿರುವುದರ ಬಗ್ಗೆ ನಾವು ಆಗಾಗ ಸುದ್ದಿ ವಾಹಿನಿಗಳಲ್ಲಿ ನೋಡಿಯೇ ಇರುತ್ತವೆ.

ಪ್ರಸ್ತುತ ದೇವರು ದೆವ್ವ ವಿಜ್ಞಾನ ಕೃತಿಯು ಇಂತಹ ಅವೈಜ್ಞಾನಿಕ ವಿಷಯಗಳ ಕುರಿತು ಜಾಗೃತಿ ಮೂಡಿಸುತ್ತಾ ವೈಜ್ಞಾನಿಕತೆಯ ಬಗ್ಗೆ ಅರಿವು ಮೂಡಿಸುತ್ತದೆ. ಡಾ. ಅಬ್ರಹಾಂ ಟಿ. ಕೋವೂರ್‌ ಅವರು ರಚಿಸಿರುವ ಈ ಕೃತಿಯನ್ನು ಪುರುಷೋತ್ತಮ ಬಿಳಿಮಲೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಪುರುಷೋತ್ತಮ ಬಿಳಿಮಲೆ
(21 August 1955)

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ...

READ MORE

Related Books