ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ನಮತೀಯರು

Author : ಜಿ.ಎನ್. ರಂಗನಾಥ ರಾವ್

Pages 356

₹ 270.00




Year of Publication: 2017
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011.

Synopsys

ಭಾರತದ ಪ್ರಜಾಸತ್ತೆಯ ಸರ್ವಶ್ರೇಷ್ಠ ಇತಿಹಾಸಕಾರ ಎಂದು ವಿಶ್ವವಿಖ್ಯಾತ ಟೈಮ್ ಪತ್ರಿಕೆಯ ಪ್ರಶಂಸೆಗೆ ಭಾಜನರಾಗಿರುವ ಅಂತಾರಾಷ್ಟ್ರೀಯ ಕೀರ್ತಿಯ ಲೇಖಕ ರಾಮಚಂದ್ರ ಗುಹ  ಅವರು ಈ ಕೃತಿಯನ್ನು ರಚಿಸಿದ್ಧಾರೆ.  ಜಿ. ಎನ್. ರಂಗನಾಥರಾವ್ ಅವರು ಈ ಕೃತಿಯನ್ನೂ  ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಭಾರತದ ಸಾಂಸ್ಕೃತಿಕ ವೈವಿಧ್ಯತೆಯಂತೆಯೇ ಬಹುತ್ವದ ವಿವಿಧ ಆಯಾಮಗಳಿಗೆ ಅಭಿಮುಖವಾಗಿ ರೂಪುಗೊಂಡಿರುವ ಪ್ರಬುದ್ದ ರಚನೆಗಳಾಗಿವೆ.  ಲೇಖನಗಳನ್ನು ಇಲ್ಲಿ ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ. ರಾಜಕಾರಣ ಮತ್ತು ಸಮಾಜ ಅಧ್ಯಾಯದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಮತ್ತು ಸಾಮಾಜಿಕ ಏಳುಬೀಳುಗಳ ಕಡೆಗೆ ಕಣ್ಣು ಹೊರಳಿಸಲಾಗಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ದೀರ್ಘಾಯುತ ವಿಳಂಬಿತ ಮರಣ ಎಂಬ ಲೇಖನದಲ್ಲಿ, ಕಾಂಗ್ರೆಸ್ ಪಕ್ಷದ ಏಳು ಬೀಳುಗಳನ್ನು ಭಾರತದ ಏಳು ಬೀಳುಗಳ ಜೊತೆಗೆ ಇಟ್ಟು ಚರ್ಚಿಸ ಲಾಗಿದೆ. ಅಭಿವ್ಯಕ್ತಿ ಸ್ವಾತಂತ್ಯಕ್ಕೆ ಇರುವ ಎಂಟು ಬೆದರಿಕೆಗಳು, ಚೈನಾ ಮುಖೇನ ಚಿಂತನೆ, ಭಾರತ ಮತ್ತು ಶ್ರೀಲಂಕಾಗಳಲ್ಲಿ ಪ್ರಜಾಪ್ರಭುತ್ವ ಮತ್ತು ಹಿಂಸಾಚಾರ ಮೊದಲಾದ ವಿಷಯಗಳನ್ನು ಇದು ಒಳಗೊಂಡಿದೆ. ಎರಡನೆ ಅಧ್ಯಾಯವನ್ನು ತತ್ವ ಸಿದ್ದಾಂತಗಳು ಮತ್ತು ಧೀಮಂತರು ಎಂದು ವಿಂಗಡಿಸಲಾಗಿದೆ. ಭಾರತದ ಮೇಲೂ ವಿಶ್ವದ ಮೇಲೂ ಪರಿಣಾಮ ಬೀರಿರುವ ಮಹಾನ್ ಚಿಂತಕರನ್ನು ಆಯ್ಕೆ ಮಾಡಿಕೊಂಡು, ಅವರ ಚಿಂತನೆಗಳನ್ನು ಮುಂದಿಟ್ಟು ವರ್ತಮಾನವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.  

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books