ಕನ್ನಡ ಮರಾಠಿ ನಂಟು: ಮುನ್ನೋಟ

Author : ಕೆ.ವಿ. ನಾರಾಯಣ

Pages 87

₹ 40.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560108
Phone: 132 - 23183311, 23183312

Synopsys

ಕನ್ನಡ ಮತ್ತು ಮರಾಠಿ ನುಡಿ ಸಂಸ್ಕೃತಿಗಳ ನಡುವಣ ನಂಟು ಹಲವು ಶತಮಾನಗಳಷ್ಟು ಹಿಂದಿನದು. ಕನ್ನಡ ಮತ್ತು ಮರಾಠಿ ನುಡಿಗಳ ಹುಟ್ಟು ಬೆಳವಣಿಗೆಗಳ ನಡುವೆಯೂ ಕೆಲವು ಹಂಚಿಕೊಂಡ ಎಳೆಗಳಿವೆ. ಈ ನುಡಿಗಳನ್ನಾಡುವ ರಾಜ್ಯಗಳ ನಡುವೆ ರಾಜಕೀಯ ಕಾರಣಗಳಿಂದ ಎಳೆದ ಗಡಿರೇಖೆಗಳನ್ನು  ಹೊಡೆದು ನುಡಿಗಳ ವಿಸ್ತಾರವು ಹರಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡು ನುಡಿಗಳ ಬರಹಗಳು ಒಂದರಿಂದ ಇನ್ನೊಂದಕ್ಕೆ ಚಲಿಸುವ ಬಗೆಯೂ ದೀರ್ಘಕಾಲದಿಂದ ನಡೆದುಕೊಂಡು ಬಂದಿದೆ. ಪ್ರಸ್ತುತ  ಕೂಡ ನಡೆಯುತ್ತಿದೆ. ಕನ್ನಡಕ್ಕೆ ಅನುವಾದಗೊಂಡಿರುವ ಮರಾಠಿ ಕಥನ ಸಾಹಿತ್ಯ. ಮರಾಠಿಯಲ್ಲಿ ಕನ್ನಡ, ಕನ್ನಡ ಮರಾಠಿ ಅನುವಾದ ಪ್ರಕ್ರಿಯೆ ಹೀಗೆ ಹಲವು ವಿಷಯಗಳನ್ನು ಲೇಖಕ ಕೆ.ವಿ. ನಾರಾಯಣ ಅವರು  ’ಕನ್ನಡ ಮರಾಠಿ ನಂಟು: ಮುನ್ನೋಟ’  ಎಂಬ ಕೃತಿಯಲ್ಲಿ ವಿವರಿಸಿದ್ದಾರೆ. 

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Related Books