ಸಂತ ಚಳವಳಿ

Author : ಚಂದ್ರಕಾಂತ ಪೋಕಳೆ

Pages 220

₹ 500.00




Year of Publication: 2019
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ , ಮಲ್ಲತ್ತಹಳ್ಳಿ ಬೆಂಗಳೂರು-560056

Synopsys

‘ಸಂತ ಚಳವಳಿ’ ಕೃತಿಯ ಮರಾಠಿ ಲೇಖಕ ಬಾ. ರಂ. ಸುಂಠಣಕರ್ ಆಗಿದ್ದು, (ಮೂಲ: 'ಸಂತ ಮಂಡಲಾಚಿ ಐತಿಹಾಸಿಕ್ ಕಾರ್ಯ' ) ಕನ್ನಡಕ್ಕೆ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿದ್ದಾರೆ. ಕೃತಿಗೆ ಕೆ.ಮರುಳಸಿದ್ದಪ್ಪ ಅವರು, ಭಾರತೀಯ ಸಂತ ಚಳವಳಿಗೆ ತನ್ನದೇ ಆದ ಮಹತ್ವವಿದೆ. ಭಾರತೀಯ ಸಂತರು ಸಂಸ್ಕೃತಕ್ಕೆ ಪ್ರತಿಯಾಗಿ ನಿಲ್ಲುವಂತೆ ಸಾಹಿತ್ಯಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿದರು. ಇವರ ಉದ್ದೇಶ ಸಾಹಿತ್ಯ ರಚನೆಗಿಂತ ಜನಪರ ಧೋರಣೆಯ ಧಾರ್ಮಿಕ ಹಾಗೂ ಸಮಾಜ ಸುಧಾರಣೆಯೇ ಮುಖ್ಯ ಗುರಿಯನ್ನೊಳಗೊಂಡಿತ್ತು. ಕೆಳಜಾತಿಯ ಜನರ ಮೇಲಿನ ಪ್ರೀತಿ, ಸಮಾನತೆ, ಸಹಬಾಳ್ವೆ, ಭ್ರಾತೃತ್ವ ಒಟ್ಟಿನಲ್ಲಿ ವಿಶ್ವಾತ್ಮಕತೆಯ 'ಮನೋಭಾವನೆಯನ್ನು ಬಿತ್ತುವುದು ಇವರ ಉದ್ದೇಶವಾಗಿತ್ತು ಎಂಬುದನ್ನು ಇಲ್ಲಿ ಲೇಖಕ ವಿಶ್ಲೇಷಿಸುತ್ತಾರೆ.

ಗುರುನಾನಕ, ಚೈತನ್ಯ, ರಮಾನಂದ, ಕಬೀರ, ನರಸೀಮೆಹತಾ, ಚಂಡೀದಾಸ, ಕನಕದಾಸ, ಜಯದೇವ, ವಿದ್ಯಾಪತಿ, ತುಳಸೀದಾಸ, ಸೂರದಾಸ, ರವಿದಾಸ, ಪುರಂದರ ದಾಸ, ಏಕನಾಥ ಸೌತ ಮಾಲಿ, ನರಹರಿ, ಗೋರಾಸೇನಾ, ತುಕಾರಾಮ ಮೊದಲಾದವರು ಭಾರತದಲ್ಲಿ ಭ್ರಾತೃತ್ವ ಭಾವನೆ ಬಿತ್ತಿದವರು. ಮಹಾರಾಷ್ಟ್ರದಲ್ಲಿಯೂ ಸಹ ಸಂತ ಚಳವಳಿ ಬಹುದೊಡ್ಡಮಟ್ಟದಲ್ಲಿ ನಡೆಯಿತು. ಇಂತಹ ಸಂತ ಚಳವಳಿಯ ಸ್ವರೂಪ, ಅದರ ಉದ್ದೇಶ, ವ್ಯಾಪ್ತಿ ಮತ್ತು ಅದರ ಕೊಡುಗೆಗಳನ್ನುಇಲ್ಲಿ ಸ್ಮರಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books