ಲೋಹಿಯಾ

Author : ಹಸನ್ ನಯೀಂ ಸುರಕೋಡ

Pages 252

₹ 120.00




Year of Publication: 2000
Published by: ಲೋಹಿಯಾ ಪ್ರಕಾಶನ
Address: ಕ್ಷಿತಿಜ ಕಪ್ಪಗಲ್ಲು ರಸ್ತೆ, ಬಳ್ಳಾರಿ - 583103,
Phone: 0839274909

Synopsys

`ಲೋಹಿಯಾ’ ಕೃತಿಯು ಹಸನ್ ನಯೀಂ ಸುರಕೋಡ’ ಅವರ ಜೀವನ ಚರಿತ್ರೆಯಾಗಿದೆ. ಈ ಕೃತಿಯು 13 ಅಧ್ಯಾಯಗಳಾದ, ಗಂಗೆಯ ದಡದಿಂದ ಸರಯೂ ದಡಕ್ಕೆ, ಭಾಗ್ಯವಂತ ಗಿಡ ಮುದ್ದಾದ ಎಲೆ, ಲಂಡನ್ ಮತ್ತು ಬರ್ಲಿನ್ ನಡುವಣ ಆಯ್ಕೆ, ನನ್ನದಂತೂ ಹೋರಾಟದ ಹಾದಿ, ಪ್ರಥಮ ಸೆರೆಮನೆ ವಾಸ, ದೇಶ ಹಾಗೂ ಗಾಂಧಿಯ ಮೋಹ, 1942ರ ಚಂಡಮಾರುತ ಮತ್ತು ಲಾಹೋರ್ ಕೋಟೆಯ ಯಾತನೆ, ಲೋಹಿಯಾರಿಗೆ ಪ್ರೀತಿ ವಂದನೆ, ಅರ್ಧಕ್ಕೆ ನಿಂತ ಗಾಂಧಿ ಮಾತು, ವಿಶ್ವ ಪರ್‍ಯಟನ, ಒಂಟಿ ಪಯಣ, ದಾಂಗುಡಿ ಇಟ್ಟ ಸಮಾಜವಾದ, ಲೋಕ ಸಭೆಯಲ್ಲಿ ಪ್ರವೇಶ ಸೇರಿದಂತೆ ಅಂತಿಮ ಅಧ್ಯಾಯವನ್ನು ಈ ಕೃತಿಯು ಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದಿರುವ ಪದ್ಮರಾಜ ದಂಡಾವತಿ ಅವರು, ಇದು ನಿಜಕ್ಕೂ ಸಂಕೋಚದ ವಿಷಯ: ಕಳೆದ ಎರಡು ದಶಕಗಳಿಂದ ಲೋಹಿಯಾ ಅವರ ಚಿಂತನೆಗಳನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ತೊಡಗಿರುವ ಹಸನ್‌ ನಯೀಂ ಸುರಕೋಡ ಅವರಿಗೆ ಈ ಮುನ್ನುಡಿಯ ಬೆಂಬಲದ ಅಗತ್ಯವಿತ್ತು ಎಂದು ನನಗೇನೂ ಅನ್ನಿಸುವುದಿಲ್ಲ. ಲೋಹಿಯಾ ಚಿಂತನೆಗಳನ್ನು ಕನ್ನಡಕ್ಕೆ ತರುವಲ್ಲಿ ಸುರಕೋಡರ ಶ್ರಮ ಮತ್ತು ಆಸಕ್ತಿಗಳೆರಡನ್ನೂ ಗಮನಿಸಿ ರಾಜ್ಯ ಸರ್ಕಾರವು ಡಾ. ರಾಮಮನೋಹರ ಲೋಹಿಯಾ ಸಮಗ್ರ ಕೃತಿಗಳ ಪ್ರಕಟನಾ ಸಮಿತಿ ಸದಸ್ಯರಾಗಿ ಅವರನ್ನು ನೇಮಿಸಿತು! ಹಸನ್ ಸಾಹೇಬರು ನನ್ನ ಅಣ್ಣನ ಸಹಪಾಠಿ. ಆದರೆ ಅವರಿಗೆ ನನ್ನ ಜೊತೆಗೆ ಹೆಚ್ಚಿನ ಸಲಿಗೆ; ಸ್ನೇಹ. ಇದೀಗ ಪ್ರಕಟವಾಗುತ್ತಿರುವ ಡಾ. ಲೋಹಿಯಾ ಅವರ ಜೀವನ ಚರಿತ್ರೆಯನ್ನು ಅದು ಹಸ್ತಪ್ರತಿಯಲ್ಲಿ ಇರುವಾಗಲೇ ನಾನು ಪೂರ್ತಿ ಓದಿದ್ದೆ. ನಾನು ತಿಳಿದ ಹಾಗೆ ಲೋಹಿಯಾ ಅವರ ಜೀವನ ಮತ್ತು ಹೋರಾಟದ ಬಗೆಗೆ ಕನ್ನಡದಲ್ಲಿ ಇಷ್ಟು ಗಾತ್ರದ ಜೀವನ ಚರಿತ್ರೆ ಬರುತ್ತಿರುವುದು ಇದೇ ಮೊದಲು ಎಂದಿದ್ದಾರೆ. ಕರ್ನಾಟಕದಲ್ಲಿ ಲೋಹಿಯಾವಾದದ ಇತಿಹಾಸಕ್ಕೆ ಹೆಚ್ಚು ಕಡಿಮೆ 60 ವರ್ಷಗಳೇ ತುಂಬಿವೆ. ಈ ದೇಶ ಕಂಡ ಅತ್ಯಂತ ಪ್ರಖರ ಚಿಂತಕರಲ್ಲಿ ಒಬ್ಬರಾದ ಲೋಹಿಯಾ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಫಾಲೋಯಿಂಗ್ ಇದೆ. ಆದರೆ ಇಷ್ಟು ವರ್ಷಗಳಾದರೂ ಈ ನಾಯಕನ ಸಮಗ್ರ ಎನ್ನಬಹುದಾದಂಥ ಜೀವನ ಚರಿತ್ರೆಯೊಂದು ಪ್ರಕಟವಾಗದಿರುವುದು ಆಶ್ಚರ್ಯವೇ. ಸುರಕೋಡ ಅವರು ಈ ಕೊರತೆಯನ್ನು ತಡವಾಗಿಯಾದರೂ ತುಂಬಿಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು ಸಲ್ಲಬೇಕು. ಡಾ. ಲೋಹಿಯಾ ಅವರದು ಬಾಲ್ಯದಿಂದಲೂ ಸ್ವಾತಂತ್ರ್ಯ ಬಯಸುವ ಸ್ವಭಾವ. ಅವರು ಅತ್ಯಂತ ಹಟಮಾರಿಯಾಗಿದ್ದರು ಎಂಬ ಅಂಶವೂ ಈ ಚರಿತ್ರೆಯಲ್ಲಿ ಬರುತ್ತದೆ. ಬಿ.ಎ. ಮುಗಿಸಿ ಉನ್ನತ ಅಭ್ಯಾಸಕ್ಕೆ ಜರ್ಮನಿಗೆ ಹೋದ ಅವರು ಅಲ್ಲಿ ಹಿಟ್ಲರ್‌ನ ಫ್ಯಾಸಿಸಂನ ಅಟ್ಟಹಾಸ ನೋಡಿ ದಂಗಾಗಿ ಹೋಗುತ್ತಾರೆ. ಅವರು ಅಲ್ಲಿ ಕಂಡದ್ದು ಅನುಭವಿಸಿದ್ದು ಮುಂದಿನ ಅವರ ಇಡೀ ಜೀವನವನ್ನು ರೂಪಿಸಿದಂತೆ ಭಾಸವಾಗುತ್ತದೆ. ಅತ್ಯಂತ ಸಂವೇದನಾಶೀಲರಾಗಿದ್ದ ಲೋಹಿಯಾ ಜರ್ಮನಿಯಿಂದ ಭಾರತಕ್ಕೆ ಬಂದಾಗ ಇಲ್ಲಿ ಬ್ರಿಟಿಷ್‌ರ ಅಟ್ಟಹಾಸ ಅವರನ್ನು ಎದುರುಗೊಂಡಿತು. ಬರ್ಬರ ವರ್ತನೆಯಲ್ಲಿ ಬ್ರಿಟಿಷರು ಜರ್ಮನರ ಸೋದರರು ಎಂಬುದು ಲೋಹಿಯಾ ಅವರ ಜೀವನದಲ್ಲಿ ಅನೇಕ ಸಾರಿ ನಿಜವಾಯಿತು. ಲಾಹೋರ್‌ ಕಾರಾಗೃಹದಲ್ಲಿ ಲೋಹಿಯಾ ಅನುಭವಿಸಿದ ಅತ್ಯಂತ ಅಮಾನುಷ ಹಿಂಸೆ ಇದಕ್ಕೆ ಒಂದು ನಿದರ್ಶನ. ಬಹುಶಃ ಈ ಕಾರಣವಾಗಿಯ ಲೋಹಿಯಾ ಅವರಿಗೆ 'ಸ್ವಾತಂತ್ರ'ದ ಮಹತ್ವ ಹೆಚ್ಚು ಹೆಚ್ಚಾಗಿ ತಿಳಿಯುತ್ತ ಹೋಯಿತು ಎಂದು ಕೃತಿಯಲ್ಲಿ ವಿಶ್ಲೇಷಿಸಲಾಗಿದೆ ಎಂದಿದ್ದಾರೆ.

About the Author

ಹಸನ್ ನಯೀಂ ಸುರಕೋಡ

ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...

READ MORE

Related Books