ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ

Author : ಬಿ. ಗಂಗಾಧರಮೂರ್ತಿ

Pages 192

₹ 140.00




Year of Publication: 2010
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಲಾಡ್ಜ್, ಗದಗ-582101
Phone: 9480286844

Synopsys

ಪ್ರಗತಿಪರ ಚಿಂತಕ ಹಾಗೂ ಅಂಬೇಡ್ಕರ್‌ವಾದಿ ಆನಂದ ತೇಲ್ತುಂಬ್ಡೆ ಅವರು ಸಂಪಾದಿಸಿರುವ ಬರಹಗಳ ಕೃತಿಯ ಕನ್ನಡ ಅನುವಾದ. ವಿವಿಧ ಲೇಖಕರು ಬರೆದ ’ಕೋಮುವಾದಿ ಕಾರ್ಯಚರಣೆ’ ಹಾಗೂ ’ದಲಿತ ಪ್ರತಿಸ್ಪಂದನೆ’ ಕುರಿತ ಬರೆಹಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ. ಬಿ. ಗಂಗಾಧರಮೂರ್ತಿ ಮತ್ತು ಬಿ. ಶಿವಸುಂದರ್‌ ಅವರು ಅನುವಾದಿಸಿ, ಸಂಯೋಜಿಸಿದ್ದಾರೆ.

About the Author

ಬಿ. ಗಂಗಾಧರಮೂರ್ತಿ - 10 September 2022)

ಲೇಖಕ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಮೂಲತಃ  ಹೊಳೆನರಸೀಪುರದವರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಸುಮಾರು 30 ಬೊಧನೆ ಮಾಡಿದವರು. ’’ನವ್ಯ ಕತೆಗಳು” ಅವರು ಬರೆದ ವಿಮರ್ಶಾ ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿದೆ. ಅನುವಾದ ಕ್ಷೇತ್ರದಲ್ಲಿ ಇವರ ಸೇವೆ ಗಮನಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಶಸ್ತಿ ನೀಡಿ ಗೌರವಿಸಿದೆ. ಸೂಫಿ ಕಲ್ಚರ್ ಸಂಪಾದಕ  ಸಮಿತಿಯಲ್ಲಿ ಪ್ರವಾಚಕರಾಗಿದ್ದರು. ಭಾರತ ಜ್ಞಾನ-ವಿಜ್ಞಾನ ಸಮಿತಿ ಪ್ರಕಟಿಸುತ್ತಿದ್ದ ‘ಟೀಚರ್’ ಮಾಸಿಕದ ಮುಖ್ಯ ಸಂಪಾದಕರಾಗಿದ್ದರು. ಕರ್ನಾಟಕದ ಗೌರಿಬಿದನೂರು ನಗರದಲ್ಲಿ ವಾಸವಿದ್ದು, ವಿದುರಾಶ್ವತ ಫ್ರೀಡಂ ಮೆಮೊರಿಯಲ್ ಮ್ಯೂಜಿಯಂ ಸಂಸ್ಥೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ...

READ MORE

Related Books