ಆಧುನಿಕ ಭಾರತದತ್ತ ಫ್ರಾನ್ಸ್‌ನ ನೋಟ

Author : ಮನು (ಪೆನುಗೊಂಡೆ ನರಸಿಂಹರಂಗನ್‌)

Pages 98

₹ 10.00




Year of Publication: 2013
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560178
Phone: 202 - 23183311, 23183312

Synopsys

ಭಾರತದ ಮಹಾ ಪುರುಷರ ಬಗೆಗಿನ ಫ್ರಾನ್ಸ್ ಜನರ ಆಸಕ್ತಿ ಎಂದಿಗೂ ಇರುವಂತಹುದೇ. ಅಂತಹ ಐದು ಮಹಾಪುರುಷರುಗಳಾದ ರವೀಂದ್ರನಾಥ ಠಾಕೂರ್, ಸ್ವಾಮಿ ವಿವೇಕಾನಂದ, ಲಾಲಾ ಲಜಪತ್ರಾರಯ್, ಮಹಾತ್ಮ ಗಾಂಧಿ ಹಾಗೂ ವಿನೋಬಾ ಬಾವೆ ಇವರನ್ನು ಕುರಿತ ಐದು ಲೇಖನಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಮೊದಲನೆಯ ಅಧ್ಯಾಯದಲ್ಲಿ ರವೀಂದ್ರನಾಥ ಠಾಕೂರ್ ಹಾಗು ಭಾರತದ ಕುರಿತು ವಿವಿಧ ಲೇಖಕರು ಹೇಳಿರುವುದನ್ನು ನೀಡಲಾಗಿದೆ. ಎರಡನೆಯದರಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ, ಮೂರನೆಯದರಲ್ಲಿ ಲಾಲಾ ಲಜಪತ್ ರಾಯ್ ಅವರ ಕುರಿತು ರೋಲ್ಯಾಂಡ್ರ ಅಭಿಪ್ರಾಯಗಳು, ನಾಲ್ಕನೆಯದರಲ್ಲಿ ಮಹಾತ್ಮ ಗಾಂಧಿಯವರ ವಿಷಯದಲ್ಲಿ ವಿದೇಶೀಯರ ದೃಷ್ಟಿ, ಹಾಗೂ ಐದನೆಯ ಅಧ್ಯಾಯದಲ್ಲಿ ವಿನೋಬಾ ಅವರ ಕುರಿತು ಸ್ಪಷ್ಟವಾದ ವಿವರಗಳು ಈ ಕೃತಿಯಲ್ಲಿ ನೀಡಲಾಗಿದೆ.

About the Author

ಮನು (ಪೆನುಗೊಂಡೆ ನರಸಿಂಹರಂಗನ್‌)
(27 July 1946 - 08 November 2011)

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ 1946 ರ ಜುಲೈ 27 ರಂದು  ಮನು (ಪೆನುಗೊಂಡೆ ನರಸಿಂಹರಂಗನ್‌) ಜನಿಸಿದರು. ತಂದೆ ಪೆನುಗೊಂಡೆ ದೇಶಿಕಾಚಾರ್ಯರು, ತಾಯಿ ರಂಗನಾಯಕಮ್ಮ. ಮೆಕ್ಯಾನಿಕಲ್‌ ಎಂಜಿನಿಯರರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಾಹ್ಯ ವಿದ್ಯಾರ್ಥಿಯಾಗಿ  ಎಂ.ಎ. ಪದವೀಧರರು. ಮೈಸೂರು ವಿಶ್ವವಿದ್ಯಾಲಯದಿಂದ ಎಪಿಗ್ರಫಿ ಡಿಪ್ಲೊಮ ಮತ್ತು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಮನಃಶಾಸ್ತ್ರ) ಪದವೀಧರರು. ಮೈಸೂರಿನ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ. ನಂತರ ಕೆ.ಜಿ.ಎಫ್‌.ನ ಭಾರತ್‌ ಅರ್ಥ್‌‌ಮೂವರ್ಸ್‌ನಲ್ಲಿ ಸಂಶೋಧನಾ ಎಂಜಿನಿಯರಾಗಿ, ಚೆನ್ನೈನ ಬ್ರೇಕ್ಸ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಪ್ರೊಡಕ್ಷನ್‌ ಎಂಜನಿಯರಾಗಿ,  ಪುಣೆಯ ಆಟೋಮೊಬೈಲ್‌ ರಿಸರ್ಚ್ ಅಸೋಸಿಯೇಷನ್‌ ಆಫ್‌ ಇಂಡಿಯಾದಲ್ಲಿ ಡೆಪ್ಯುಟಿ ಡೈರೆಕ್ಟರ್ , ...

READ MORE

Related Books