ಮಂದಿರ ಅಪವಿತ್ರೀಕರಣ ಮತ್ತು ಇಂಡೋ-ಮುಸ್ಲಿಂ ಸಾಮ್ರಾಜ್ಯಗಳು

Author : ಸುರೇಶ ಭಟ್ ಬಾಕ್ರಬೈಲ್‌

Pages 88

₹ 60.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ ಹೋಟೆಲ್, ಗದಗ- 582101
Phone: 9480286844

Synopsys

ಲೇಖಕ ರಿಚರ್ಡ್ ಎಂ. ಈಟನ್ ಬರೆದಿರುವ ಮೂಲ ಕೃತಿಯನ್ನು ಕನ್ನಡಕ್ಕೆ ’ ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು’ ಎಂಬ ಕನ್ನಡ ಅನುವಾದದಲ್ಲಿ ಸುರೇಶ ಭಟ್ ಬಾಕ್ರಬೈಲ್ ಅವರು ತಂದಿದ್ದಾರೆ. 

ಜನಾಂಗೀಯವಾದಿ ಮತೀಯವಾದಿ ಸಿದ್ಧಾಂತಗಳು ಗತದ ವೈಭವೀಕರಣದೊಂದಿಗೆ ಕಾಲ್ಪನಿಕ ಶತ್ರುಗಳನ್ನು ಬೇಡುವಂತದ್ದು. ಹುಸಿ ರಾಷ್ಟ್ರೀಯತೆಯನ್ನು ಹುಟ್ಟುಹಾಕಿದ ಫ್ಯಾಸಿಸರಿಗೆ, ನಾಜಿಗಳಿಗೆ ವಲಸೆಗಾರರು ಶತ್ರುಗಳಾದರು. ಇದೇ ಫ್ಯಾಸಿಸಂ ಸಿದ್ದಾಂತದಿಂದ ಪ್ರೇರಿತವಾದ  ಬ್ರಾಹ್ಮಣರ ಒಂದು ವರ್ಗ ಆರ್ಯ ಶ್ರೇಷ್ಠತೆಯ ಹಿಂದೂ ರಾಷ್ಟ್ರದ ಕನಸು ಕಂಡಿತು. ಮತಗಳು ಸ್ವದೇಶಿ ಮತ್ತು ವಿದೇಶಿ ಎಂದು ವಿಂಗಡಣೆಗೆ ಒಳಗಾದವು.  ಅದಕ್ಕೆ ಮೊದಲು ಜೈನ, ಬೌದ್ಧ, ಸಿಖ್, ಬಸವ, ನಾರಾಯಣ ಗುರು ಮೊದಲಾದ ಮತಗಳನ್ನು ಹಿಂದೂ ಧರ್ಮವೆಂಬ ವಿಶಾಲತೆಯಲ್ಲಿ ಸೇರಿಸಿಕೊಂಡರು.

ಹಿಂದೂ ಧರ್ಮವೊಂದೆ ಸ್ವದೇಶಿ ಮತವೆಂದು ಸಾರಿ ಅದರ ಅನುಯಾಯಿಗಳೆಲ್ಲ ಪ್ರಥಮ ದರ್ಜೆಯ ಪ್ರಜೆಗಳು ಎಂದರು. ಇಸ್ಲಾಂ, ಕ್ರೈಸ್ತ, ಯಹೂದ್ಯ, ಪಾರಸಿ ಮತಗಳು ಹೊರಗಿನಿಂದ ಬಂದವುಗಳು ಎನ್ನುತ್ತ ಈ “ವಿದೇಶಿ' ಮತಾನುಯಾಯಿಗಳನ್ನು ದ್ವಿತೀಯ ದರ್ಜೆಯ ಪ್ರಜೆಗಳೆಂದು ಕರೆದರು.  ಅನ್ಯ ಮತೀಯರೆಲ್ಲ ಕ್ರೂರಿಗಳು, ಮತಾಂತರಿಗಳು, ಹಿಂದೂ ಮಂದಿರಗಳನ್ನು ನಾಶಪಡಿಸಿದವರೆಂದು ಬಿಂಬಿಸುವ ಕಾರ್ಯ ಸಾಹಿತ್ಯ, ಕಲೆ, ಶಿಕ್ಷಣ ಮೊದಲಾದ ವಿವಿಧ ಕ್ಷೇತ್ರಗಳ ಮೂಲಕ ಸಮಾಜದ ವಿವಿಧ ಸ್ಥರಗಳಲ್ಲಿ ನಿರಂತರವಾಗಿ ಸಾಗಿದೆ.

’ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು’  ಕೃತಿಯು ಇವುಗಳ ಹಿನ್ನಲೆಯಲ್ಲಿ ವೈಚಾರಿಕ ನಿಲುವುಗಳನ್ನು ಓದುಗರಿಗೆ ನೀಡಿದೆ. 

About the Author

ಸುರೇಶ ಭಟ್ ಬಾಕ್ರಬೈಲ್‌

ಮಂಗಳೂರಿನವರಾದ ಸುರೇಶ ಭಟ್ ಬಾಕ್ರಬೈಲ್ ಅವರು ಸುರತ್ಕಲ್ ನ ಕೆ.ಆರ್.ಇ.ಸಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು. ಮುಂಬಯಿಯಲ್ಲಿ ವಾಣಿಜ್ಯ ನೌಕೆ, ನೌಕಾ ನಿರ್ಮಾಣ, ಡೀಸಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು 2006ರಲ್ಲಿ ನಿವೃತ್ತರಾದರು. ನಿವೃತ್ತರಾದ ನಂತರ ಅವರು ಬರಹ ಹಾಗೂ ಮಾನವ ಹಕ್ಕು, ಕೋಮು ಸೌಹಾರ್ದ ಚಳವಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಬರೆಯುವದರ ಜೊತೆಗೆ ಕೋಮುವಾದದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಕೇಸರಿ ಭಯೋತ್ಪಾದನೆ, ಮಂಕು ಬೂ(ಮೋ)ದಿ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಕರ್ಕರೆಯನ್ನು ಕೊಂದವರು ಯಾರು?, ಜೈಲಿನ ...

READ MORE

Related Books