ಮಾನುಷಿಯ ಮಾತು

Author : ಎಲ್.ಜಿ. ಮೀರಾ

Pages 148

₹ 55.00




Year of Publication: 1997
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ-ಹೆಗ್ಗೋಡು, ಸಾಗರ, ಕರ್ನಾಟಕ-577417

Synopsys

ಮಾನುಷಿಯ ಮಾತು- ಭಾರತದ ಪ್ರಮುಖ ಸ್ತ್ರೀವಾದಿ ಚಿಂತಕಿಯಾದ ಮಧುಕೀಶ್ವರ್ ಅವರ ಲೇಖನಗಳ ಅನುವಾದ ಕೃತಿ. ಮಾನುಷಿ ಎಂಬ ಪತ್ರಿಕೆ ಮತ್ತು ಅದೇ ಹೆಸರಿನ ಸಂಸ್ಥೆಯನ್ನು ಆರಂಭಿಸಿ ಸ್ತ್ರೀವಾದಕ್ಕೆ ಪ್ರಬಲವಾದ  ಧ್ವನಿಯನ್ನು ತಂದುಕೊಟ್ಟರಲ್ಲದೇ ಪಶ್ಚಿಮದಲ್ಲಿ ರೂಪುಗೊಂಡ ಸ್ತ್ರೀವಾದದ ಪರಿಕಲ್ಪನೆಗಳಿಗಿಂತ ಭಿನ್ನವಾಗಿ ಭಾರತದ ಚಿಂತನಾಕ್ರಮಗಳ ಮೂಲಕವೇ ಇದನ್ನು ಅರ್ಥೈಸುವ ಪ್ರಯತ್ನವನ್ನೂ ನಡೆಸಿದ್ದಾರೆ. ಅವರ ಕೆಲವು ಲೇಖನಗಳನ್ನು ಎಲ್.ಜಿ ಮೀರಾ ಕನ್ನಡೀಕರಿಸಿದ್ದಾರೆ.

About the Author

ಎಲ್.ಜಿ. ಮೀರಾ
(05 May 1971)

ಸ್ತ್ರೀವಾದಿ ಚಿಂತಕಿ, ಲೇಖಕಿ, ಭರತನಾಟ್ಯ ವಿದ್ವತ್ ಎಲ್.ಜಿ.ಮೀರಾ ಕೊಡಗಿನವರು. ತಾಯಿ ಯು.ಕೆ ಚಿತ್ರಾವತಿ, ತಂದೆ ಎಲ್.ಜಿ.ಗುರುರಾಜ್ ಹುಟ್ಟಿದ್ದು 5-5-1971 ರಲ್ಲಿ. ಬಿ.ಎಸ್ಸಿ, ಎಂ.ಎ ಪದವಿ ಪಡೆದ ಇವರು ಪಿ.ಎಚ್ ಡಿಯನ್ನೂ ಪಡೆದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಭರತನಾಟ್ಯವನ್ನು ಕಲಿಸುವುದು ಇವರ ಹವ್ಯಾಸವಾಗಿದೆ.  ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ...

READ MORE

Related Books