ಜೀವಕೋಶಗಳ ಸಂಭ್ರಮಾಚರಣೆ: ಕ್ಯಾನ್ಸರ್‌ ಮೇಲಿನ ವಿಜಯ

Author : ಪಿ.ಎಸ್. ಶಂಕರ್

Pages 151

₹ 60.00




Year of Publication: 2007
Published by: ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು.

Synopsys

‘ಜೀವಕೋಶಗಳ ಸಂಭ್ರಮಾಚರಣೆ’ ಕ್ಯಾನ್ಸರ್ ನ ಸ್ವರೂಪ, ಅದರ ಕಾರಣಗಳು, ಚಿಕಿತ್ಸೆ ಮತ್ತು ಪರಿಹಾರದ ವಿಸ್ತೃತ ವಿವರಣೆ ಈ ಕೃತಿಯಲ್ಲಿದೆ. ಪ್ರಾಯಶಃ ಅದು ಕ್ಯಾನ್ಸರ್‌ ರೋಗಿಗಳಿಗೆ ಕ್ಯಾನ್ಸರ್‌ ಮತ್ತು ಅದರ ಚಿಕಿತ್ಸೆಯಿಂದ ಉದ್ಭವಿಸುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ತಿಳಿದುಕೊಳ್ಳಲು, ಒಪ್ಪಿಕೊಳ್ಳಲು ಮತ್ತು ತಾಳಿಕೊಳ್ಳಲು ಸಹಾಯ ಮಾಡುತ್ತದೆ. ವೈದ್ಯರು ಮತ್ತು ದೇವರು, ಕುಟುಂಬ ಮತ್ತು ಸ್ನೇಹಿತರು, ನಿಸರ್ಗ ಮತ್ತು ಪರಿಸರ, ಆಹಾರ ಮತ್ತು ಹಣ್ಣುಗಳು, ಕಾಯಕ ಮತ್ತು ಸೃಜನಶೀಲತೆ, ಯೋಗ ಮತ್ತು ವ್ಯಾಯಾಮ, ಮನಸ್ಸು ಮತ್ತು ದೃಷ್ಟಿಕೋನಗಳಲ್ಲಿಯ ನಂಬುಗೆಯ ಬಗ್ಗೆ ಒತ್ತುಕೊಡಲಾಗಿದೆ. ಈ ಅಂಶಗಳು ಸಹಜ ಮತ್ತು ಕ್ಯಾನ್ಸರ್‌ ಜೀವಕೋಶಗಳನ್ನು ಹೇಗೆ ಪ್ರಭಾವಿತಗೊಳಿಸುತ್ತವೆ ಎಂಬುದನ್ನು ಲೇಖಕರ ಅನುಭವದ ವಿವರಣೆಯೊಡನೆ ವಿವರಿಸಲಾಗಿದೆ. ಆರ್‌.ಎಂ. ಲಾಲಾ ಅವರು ರಚಿಸಿದ ಈ ಕೃತಿಯನ್ನು ಡಾ.ಪಿ.ಎಸ್. ಶಂಕರ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಪಿ.ಎಸ್. ಶಂಕರ್
(01 January 1936)

ವೃತ್ತಿಯಲ್ಲಿ ವೈದ್ಯರಾಗಿ ವೈದ್ಯ ಸಾಹಿತಿಯಾಗಿ ಪ್ರಸಿದ್ಧರಾಗಿರುವ ಡಾ.ಪಿ.ಎಸ್.ಶಂಕರ್ ಅವರು 1936 ಜನವರಿ 1ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಜನಿಸಿದರು. ಹುಟ್ಟೂರು ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಎಂ.ಆರ್‌. ಮೆಡಿಕಲ್‌ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.  ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಹೃದಯ ಜೋಪಾನ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಿ, ಡಾ. ವಿಕ್ರಂ ಸಾರಾಭಾಯ್‌, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ...

READ MORE

Related Books