
ಕ್ರಿ.ಶ. ಎಂಟನೇ ಶತಮಾನದ ಆಸುಪಾಸು ಕರ್ನಾಟಕದಲ್ಲಿ ಬಾದಾಮಿ ಚಾಲುಕ್ಯರು ವಿಜೃಂಭಿಸುತ್ತಿದ್ದ ಅವಧಿ. ಬಾದಾಮಿ ಚಾಲುಕ್ಯರ ಶಾಸನಗಳಲ್ಲೇ ಕಪ್ಪೆ ಅರಭಟ್ಟನ ಶಾಸನ ತುಂಬಾ ಪ್ರಸಿದ್ಧವಾದುದು. ’ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯನ್ ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ’ ಎಂದು ರಾಜನ ಹಿರಿಮೆಯನ್ನೂ ಕನ್ನಡದ ಹಿರಿಮೆಯನ್ನೂ ಆ ಶಾಸನ ಎತ್ತಿ ಹಿಡಿದಿದೆ. ಆದರೆ ಕಪ್ಪೆ ಅರಭಟ್ಟನ ಇತ್ಯೋಪರಿ ಬಗ್ಗೆ ಹಲವು ಗೊಂದಲಗಳು ಮೊದಲಿನಿಂದಲೂ ಇವೆ. ಇವುಗಳನ್ನು ಪರಿಹರಿಸುವ ಯತ್ನವೆಂಬಂತೆ ಮತ್ತು ಚಾಳುಕ್ಯರ ವಿವಿಧ ಶಾಸನಗಳ ಮೇಲೆ ಬೆಳಕು ಚೆಲ್ಲುವಂತೆ ನಾಡಿನ ಹಿರಿಯ ಸಂಶೋಧಕ ಡಾ. ಷ. ಶೆಟ್ಟರ್ ಹೊರತಂದಿರುವ ಕೃತಿ ’ಬಾದಾಮಿ ಚಾಳುಕ್ಯರ ಶಾಸನ ಸಾಹಿತ್ಯ’. |ಚಾಳುಕ್ಯರ ಕಾಲದ ಕನ್ನಡ ಲಿಪಿಯ ಬಗ್ಗೆಯೂ ಕುತೂಹಲಕರ ಮಾಹಿತಿ ಗ್ರಂಥದಲ್ಲಿದೆ.
©2025 Book Brahma Private Limited.