
ಮಾನವ ಹಕ್ಕುಗಳ ಹೋರಾಟಗಾರ, ಕೋಮುಸಾಮರಸ್ಯದ ಪ್ರತಿಪಾದಕ ರಾಮ್ ಪನಿಯಾನಿ ಅವರ ’ದಲಿತ ರಾಜಕೀಯ ಸಚಿತ್ರ ದರ್ಶನ’ ಕೃತಿ ಜಾಗತೀಕರಣದ ಸಂದರ್ಭದಲ್ಲಿ ದಲಿತರ ಸ್ಥಿತಿಗತಿಗಳನ್ನು ಕುರಿತು ವಿಶಿಷ್ಟವಾಗಿ ಚರ್ಚಿಸುತ್ತದೆ. ಸ್ವಾತಂತ್ಯ್ರ ದೊರೆತು ಎಷ್ಟೋ ದಶಕಗಳು ಸಂದರೂ ದಲಿತರಿಗೆ ವಿಮೋಚನೆ ದೊರೆತಿಲ್ಲದಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.
ಇಲ್ಲಿ ದಲಿತರ ಜೀವನ ಕುರಿತು ಚಿತ್ರಗಳಿವೆ, ಅವರ ಸ್ಥಿತಿಯನ್ನು ಕರಾರುವಕ್ಕಾಗಿ ಹೇಳುವ ಅಂಕಿ ಅಂಶಗಳಿವೆ ಅಲ್ಲದೆ ಪನಿಯಾನಿ ಅವರೊಂದಿಗೆ ನಡೆದ ಪ್ರಶ್ನೋತ್ತರ ಸಂವಾದ ಇದೆ. ಮೀಸಲಾತಿ, ಅಂಬೇಡ್ಕರ್, ದಲಿತರ ಮುಂದಿನ ಸವಾಲುಗಳು, ದಲಿತರ ರಕ್ಷಿಸುವ ಕಾಯ್ದೆಗಳು ಸೋಲುತ್ತಿರುವ ಪರಿಯನ್ನು ಇಲ್ಲಿ ವಿವರಿಸಲಾಗಿದೆ. ಕೃತಿಯನ್ನು ಬಿ. ಸುಜ್ಞಾನಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ.
©2025 Book Brahma Private Limited.