
ಲಿಂಗಾಯತ ಧರ್ಮದಲ್ಲಿ ಮುಕ್ತಿಯನ್ನು ಕಾಣಲು ಏರಬೇಕಾದ ಮಜಲುಗಳನ್ನು ಷಟ್ಸ್ಥಲ ಸೂಚಿಸುತ್ತದೆ. ಅಂಗ ಷಟ್ಸ್ಥಲ ೪೪ ಮತ್ತು ಲಿಂಗ ಷಟ್ಸ್ಥಲ ೫೭ ಸ್ಥಲಗಳನ್ನು ಹೊಂದಿರುವುದರಿಂದ ಏಕೋತ್ತರ ಶತಸ್ಥಲ ಎನ್ನಲಾಗುತ್ತದೆ.
ಅಂಗ ಷಟ್ಸ್ಥಲದಲ್ಲಿ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗ, ಶರಣ ಹಾಗೂ ಐಕ್ಯ ಎಂಬ ಐದು ವಿಭಾಗಗಳಿವೆ. ಹಾಗೆಯೇ ಲಿಂಗ ಷಟ್ಸ್ಥಲದಲ್ಲಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ ಪ್ರಸಾದಲಿಂಗ ಹಾಗೂ ಮಹಾಲಿಂಗ ಎಂಬ ಆರು ವಿಭಾಗಗಳಿವೆ.
ಇದರ ಕೃತಿಕಾರ ಯಾರು ಹಾಗೂ ಈ ಬಗೆಗೆ ಇದ್ದ ವಿವಾದಗಳನ್ನು ಪರಿಹರಿಸಲು ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ವೀರಣ್ಣ ರಾಜೂರ ಯತ್ನಿಸಿದ್ದಾರೆ.
©2025 Book Brahma Private Limited.