
ಜಾತಿ ಹುಟ್ಟುಹಾಕಿರುವ ಸಮಸ್ಯೆ ಸಾಮಾಜಿಕ ಪ್ರತ್ಯೇಕತೆ ಮತ್ತು ಅದು ನೇರವಾಗಿ ಬಡತನಕ್ಕೆ ಕಾರಣವಾಗಬಲ್ಲದು. ಹೀಗೆ ಜಾತಿಯಿಂದ ಜನಿಸಿದ ಪ್ರತ್ಯೇಕತೆಯ ಗುಣಗಳನ್ನು ಅರಿಯುವ ಉದ್ದೇಶದಿಂದ ಸುಖದೇವ್ ಥೋರಟ್ ಪ್ರಸ್ತುತ ಕೃತಿಯನ್ನು ರಚಿಸಿದ್ದಾರೆ. ಕೃತಿ ಸಮಾಜೋ ವಿಜ್ಞಾನದ ತಳಹದಿಯಲ್ಲಿ ಶೋಷಣೆಯನ್ನು ವಿಶ್ಲೇಷಿಸುತ್ತದೆ.
ಅಲ್ಲದೆ ಪ್ರತ್ಯೇಕತೆಯನ್ನು ಒಳಗೊಂಡ ದಬ್ಬಾಳಿಕೆ'ಗಳ ಸ್ವರೂಪ ಮತ್ತು ವಿವಿಧ ಆಯಾಮಗಳನ್ನು ಚರ್ಚಿಸಲಾಗಿದೆ. ತಳಸಮುದಾಯಗಳ ಬಡತನಕ್ಕೂ ಜಾತಿಗೂ ಇರುವ ನಂಟನ್ನು ಪ್ರಸ್ತಾಪಿಸಲಾಗಿದೆ. ಸಾಮಾಜಿಕ, ನಾಗರಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ವಲಯಗಳಲ್ಲಿ ಜಾತಿಯ ಕಾರಣಕ್ಕೆ ಅವಕಾಶವಂಚಿತರಾಗಲು ಕಾರಣವಾದ ನೀತಿಗಳನ್ನು ಒರೆಗೆ ಹಚ್ಚಲಾಗಿದೆ. ಜಾತಿಯ ಕಾರಣಕ್ಕೇ ಉಂಟಾದ ಆರ್ಥಿಕ ಹಿಂದುಳಿದಿರುವಿಕೆ ಸೃಷ್ಟಿಸಿರುವ ದಾರಿದ್ಯ್ರವನ್ನು ಕೃತಿ ಚರ್ಚಿಸುತ್ತದೆ.
©2025 Book Brahma Private Limited.