
ಭೂಮಿ, ನೀರು ಸೇರಿದಂತೆ ಪಂಚಭೂತಗಳ ಮೇಲೆ ಹಕ್ಕು ಸಾಧಿಸುತ್ತಿರುವ ಆಧುನಿಕ ಮನುಷ್ಯನ ಮನಸ್ಸಿನ ವಿಕಾರಗಳಿಗೆ ವಿರುದ್ಧವಾಗಿ ಜಲಶಾಸ್ತ್ರದ ಹಸ್ತಪ್ರತಿಗಳು ಮಂಡಿಸುವ ನೈತಿಕ ಪ್ರಜ್ಞೆಯು ದೇಸಿ ವಿವೇಕದ ಪ್ರತೀಕವಾಗಿದೆ. ಕೆರೆ, ಕುಂಟೆ, ಬಾವಿಗಳ ಸಂರಕ್ಷಣೆಯ ಅಗತ್ಯವನ್ನು ಈ ದೇಸಿ ವಿವೇಕ ಪ್ರತಿಪಾದಿಸುತ್ತದೆ. ಜಲಮೂಲಗಳ ನಾಶವು ಜೀವ ಜಗತ್ತಿನ ವಿನಾಶಕ್ಕೆ ಕಾರಣವಾಗುತ್ತದೆ. ಯಾವುದನ್ನು ಕೃಷಿ ಸಮಾಜವು ನೆಮ್ಮದಿಯ ಜೀವನಕ್ಕೆ ಕಾರಣ ಎಂದು ಹೇಳಿತ್ತೋ, ಅವೆಲ್ಲವೂ ವಿನಾಶದ ಅಂಚಿನಲ್ಲಿವೆ. ಇಂತಹ ಸ್ಥಿತಿಯಲ್ಲಿ ಜಲ ಶಾಸ್ತ್ರದ ಹಸ್ತಪ್ರತಿಗಳು ಹಾಗೂ ದೇಸಿ ವಿವೇಕ’ ಕೃತಿಯು ಮಹತ್ವದ ಒಳನೋಟಗಳನ್ನು ನೀಡುತ್ತದೆ.
©2025 Book Brahma Private Limited.