
ಹಿರಿಯ ಲೇಖಕ ಹಸನ್ ನಯಿಂ ಸುರಕೋಡ ಅವರು ಸಮಾಜವಾದಿ ನಾಯಕ -ಚಿಂತಕ ರಾಮಮನೋಹರ ಲೋಹಿಯಾ ಅವರು ಇಂಗ್ಲಿಷಿನಲ್ಲಿ ಬರೆದ ಹತ್ತು ಬಿಡಿ ಲೇಖನಗಳನ್ನು ‘ಸುಪ್ತ ಕ್ರಾಂತಿ, ಕಾಂಚನಮುಕ್ತಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಮನೋಹರ ಲೋಹಿಯಾ ಅವರು ಉತ್ತಮ ಮುಂದಾಳತ್ವ ಹೊಂದಿದವರು. ಅವರು ಒಬ್ಬ ಮುತ್ಸದ್ಧಿ.ಭಾರತೀಯ ಸಂಸ್ಕೃತಿ, ಜಾತಿ ಪದ್ಧತಿ, ಸಮಾಜವಾದ ಇತ್ಯಾದಿ ಕುರಿತು ಪ್ರಬುದ್ಧ ಲೇಖನಗಳನ್ನು ಬರೆಯುವ ಮೂಲಕ ತಮ್ಮದೇ ಆದ ಓದುವ ವರ್ಗವನ್ನು ಕಾಯ್ದುಕೊಂಡಿದ್ದರು. ಅವರ ಚಿಂತನೆ ಇಂದಿಗೂ ಪ್ರೇರಣೆ ನೀಡುತ್ತದೆ. ಬರಹ-ಚಿಂತನೆಗಳ ಮೂಲಕ ರಾಮಮನೋಹರ ಲೋಹಿಯಾ ಅವರ ವ್ಯಕ್ತಿತ್ವವವನ್ನು ಕಟ್ಟಿಕೊಡುವ ಕೆಲಸವೂ ಈ ಕೃತಿಯು ಜೊತೆಜೊತೆಗೆ ಮಾಡುತ್ತದೆ.
©2025 Book Brahma Private Limited.