
ಹನ್ನೆರಡನೇ ಶತಮಾನಕ್ಕೂ ಹಿಂದೆ ಅಂದರೆ ಶರಣ ಚಳವಳಿ ಆರಂಭವಾಗುವುದಕ್ಕೂ ಮೊದಲು ಶೈವ ಸಂಪ್ರದಾಯ ಹೇಗಿತ್ತು ಎಂಬುದನ್ನು ತಿಳಿಸಿಕೊಡುವ ಕೃತಿ ’ಶುದ್ಧಶೈವ ಮತ್ತು ಗೋಳಕಿಮಠದ ಸಂಪ್ರದಾಯ’.
ಪಾಶುಪತ, ನಕುಲೀಶ, ಮಹಾವ್ರತ ಪಂಥಗಳ ಅಧ್ಯಯನವನ್ನು 20ನೇ ಶತಮಾನದ ವಿದ್ವಾಂಸರು ನಡೆಸಿದ್ದರಾದರೂ ಶುದ್ಧಶೈವ ಪಂಥದ ಅಧ್ಯಯನ ಸಮಂಜಸ ಎನಿಸಿರಲಿಲ್ಲ. ಪರಿಣಾಮ ಡಾ.ಎಂ.ಎಂ. ಕಲಬುರ್ಗಿ ಅವರ ಚಿತ್ತ ಅತ್ತ ಹರಿಯಿತು. ಹದಿನೈದನೇ ಶತಮಾನದ ಹೊತ್ತಿಗೆ ಶೈವಧರ್ಮ ಹೇಗೆ ಶರಣ ಚಳವಳಿಯನ್ನು ಒಳಗೊಳ್ಳತೊಡಗಿತು, ಚತುರಾಚಾರ್ಯರು, ಪಂಚಾಚಾರ್ಯರು ಮುನ್ನೆಲೆಗೆ ಬಂದಿದ್ದು ಹೇಗೆ, ’ಸಿದ್ಧಾಂತ ಶಿಖಾಮಣಿ’ ಕೃತಿ ಯಾಕೆ ರಚನೆಯಾಯಿತು ಮುಂತಾದ ವಿಚಾರಗಳು ಸ್ಪಷ್ಟಗೊಳ್ಳುತ್ತ ಹೋದುದು ಈ ಮಹತ್ವದ ಕೃತಿಯ ಮೂಲಕವೇ.
©2025 Book Brahma Private Limited.