
ವಿನಾಯಕ ಕೃಷ್ಣ ಗೋಕಾಕ ಕನ್ನಡಸಂಸ್ಕೃತಿ ನಿರ್ಮಾಪಕರಲ್ಲಿ ಬಹು ದೊಡ್ಡ ಹೆಸರು. ಕೆಲವು ಅರ್ಥಗಳಲ್ಲಿ ಕುವೆಂಪು, ಬೇಂದ್ರೆ, ಮಾಸ್ತಿ ಮತ್ತು ಕಾರಂತರ ಸರಿಸಮಾನವಾಗಿ ನಿಂತು ಆಲೋಚಿಸುವಂಥ ಲೇಖಕರು. ಪ್ರಯೋಗಶೀಲತೆ ಅವರ ವಿಶಿಷ್ಟ ಗುಣ. ಕಾವ್ಯಕ್ಕೆ ಛಂದಸ್ಸಿನ ಚೌಕಟ್ಟನ್ನು ಮುರಿದು ಹೊಸತಾಗಿ ಪ್ರಯೋಗಿಸಿದ ದಿಟ್ಟ ಹೆಜ್ಜೆಯ ಮಾರ್ಗಕಾರ. ನಿಜವಾದ ಅರ್ಥದಲ್ಲಿ ಕನ್ನಡ ಕಾವ್ಯಕ್ಕೆ ನವ್ಯದ ರೂಪ ಮತ್ತು ವಸ್ತುವೈವಿಧ್ಯತೆಯನ್ನು ತಂದುಕೊಟ್ಟವರು. ಅವರ 'ಭಾರತ ಸಿಂಧು ರಶ್ಮಿ' ನಿಜವಾದ ಅರ್ಥದಲ್ಲಿ ಭಾರತದ ಮೊಟ್ಟಮೊದಲ ವಿಶಿಷ್ಟ ವಸ್ತುವನ್ನೊಳಗೊಂಡ, ಪರಂಪರೆಯನ್ನು ವರ್ತಮಾನದ ದೃಷ್ಟಿಕೋನಗಳಿಂದ ಬಗೆಯುವ, ಮಹಾಕಾವ್ಯದ ಜಾಡಿನಲ್ಲಿ ಅನನ್ಯವಾಗಿ ನಿಲ್ಲುವಂಥ ವಿಶಿಷ್ಠ ಕೃತಿ.
ಇಂಥ ವಿಶಿಷ್ಟ ಅನುಭವ ಪ್ರಪಂಚವನ್ನು ಕನ್ನಡ ಸಾಹಿತ್ಯಕ್ಕೆ ಅವರು ನೀಡಿರುವ ಹಲವು ಬಗೆಯ ಪ್ರಕಾರಗಳನ್ನು ಭಿನ್ನ ದೃಷ್ಟಿಕೋನಗಳಿಂದ ಮತ್ತು ಸೈದ್ದಾಂತಿಕ ನೆಲೆಗಟ್ಟಿನಿಂದ ವಿಶ್ಲೇಷಿಸಿರುವ ಲೇಖನಗಳು ಈ ಕೃತಿಯಲ್ಲಿವೆ. ಸಾಹಿತಿ ಶಿವರಾಮ ಕಾಡನಕುಪ್ಪೆ ಬಹಳ ಸೊಗಸಾಗಿ ವಿನಾಯಕರ ಸಾಹಿತ್ಯವನ್ನು ವಿಶ್ಲೇಷಿಸಿದ್ದಾರೆ.
©2025 Book Brahma Private Limited.