ಇಸ್ಲಾಂಧರ್ಮ ಸಂದೇಶ

Author : ಸಿದ್ಧರಾಮ ಸ್ವಾಮಿಗಳು

Pages 138

₹ 90.00




Published by: ಲಿಂಗಾಯತ ಅಧ್ಯಯನ ಸಂಸ್ಥೆ
Address: ವಿರಕ್ತಪಠ, ದೇಶನೂರ, ಬೈಲಹೊಂಗಲ ತಾಲೂಕು,  ಬೆಳಗಾವಿ ಜಿಲ್ಲೆ

Synopsys

‘ಇಸ್ಲಾಂಧರ್ಮ ಸಂದೇಶ’ ಕೃತಿಯ ಮೂಲ ಲೇಖಕ ವಿನೋಬಾ. ಕಾಲಿಂದೀ ಅವರು ಈ ಕೃತಿಯನ್ನು ಸಂಪಾದಿಸಿದ್ದು, ಸಿದ್ಧರಾಮ ಸ್ವಾಮಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ.  ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ವಿನೋಬಾ ಅವರಿಗೆ 'ಕುರಾನ'ದ ಬಗೆಗಿರುವ ಗ್ರಹಿಕೆಯು ನಿಸ್ಸಂದೇಹವಾಗಿ ಸರಿಯಾದುದೆಂದು ನಾನು ಹೇಳಲೇಬೇಕು. ಹಿಂದುಧರ್ಮ ಮತ್ತು ಇಸ್ಲಾಂಧರ್ಮವನ್ನು ಕುರಿತು ಈ ಗ್ರಂಥದ ಅನೇಕ ಕಡೆಗಳಲ್ಲಿ ಮಾಡಿರುವ ಹೋಲಿಕೆಯು ಅತ್ಯಂತ ಪ್ರಾಮಾಣಿಕವಾಗಿದ್ದು, ದಾರಾ ಶಿಕೋಡನು ತನ್ನ 'ಮಜಮಾ-ಅಲ್ ಬಹ್ರೈನ' (ಎರಡು ಮಹಾಸಾಗರಗಳ ಮಿಲನ-ಇಸ್ಲಾಂ ಮತ್ತು ಹಿಂದೂಧರ್ಮ)ದಲ್ಲಿ ಮಾಡಿದ ಹೋಲಿಕೆಯ ಮಟ್ಟದ್ದಾಗಿದೆ. ನನ್ನ ದೃಷ್ಟಿಯಲ್ಲಿ ಈ ಗ್ರಂಥವು ಹಿಂದೂ ಮತ್ತು ಮುಸಲ್ಮಾನರಲ್ಲಿ ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ. ತಥಾಕಥಿತ ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ಮಾಧ್ಯಮಗಳ ವಿಶ್ಲೇಷಕರು ಇಸ್ಲಾಂ ಹಾಗೂ ಹಿಂದುಧರ್ಮಗಳ ಬಗೆಗಿರುವ ಅತ್ಯಲ್ಪ ಜ್ಞಾನದ ಕಾರಣದಿಂದ ತಪ್ಪು ತಿಳಿವಳಿಕೆಗಳನ್ನು ಹಬ್ಬಿಸುತ್ತಿರುವ ಈ ದಿನಗಳಲ್ಲಿ ಇದು ಅತ್ಯವಶ್ಯವಾಗಿದೆ. ಮೌಲಾನಾ ಆಜಾದ್ ಅವರ ಹಾಗೆ ವಿನೋಬಾ, ಇಸ್ಲಾಂ ಮತ್ತು ಇತರ ಎಲ್ಲ ಧರ್ಮಗಳ ಮೂಲ ಆತ್ಮವನ್ನು ಗುರುತಿಸಿದ ವ್ಯಕ್ತಿ ಎಂಬುದು ನನ್ನ ನಂಬಿಕೆಯಾಗಿದೆ. ಇಸ್ಲಾಂದ ಸಮರ್ಥನೆ ಮತ್ತು ವಿರೋಧದಲ್ಲಿ ಸಾಕಷ್ಟು ಬರೆಯಲಾಗುತ್ತಿದ್ದರೂ ಅದು ಕೇವಲ ರಾಜಕೀಯ ಲಾಭಕ್ಕಾಗಿ. ಇದರಲ್ಲಿ ಧಾರ್ಮಿಕತೆ ಮಾಯವಾಗುತ್ತಿದೆ. ಆದ್ದರಿಂದ, ಇಸ್ಲಾಂ ಮತ್ತು ಹಿಂದೂ ಧರ್ಮಗಳ ಮೂಲ ಆತ್ಮವನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತ, ಧಾರ್ಮಿಕ ದರ್ಶನಗಳ ಆಧಾರದಲ್ಲಿ ಅವುಗಳನ್ನು ಪ್ರಸ್ತುತಪಡಿಸುವುದು ಅತ್ಯಂತ ಅವಶ್ಯವಾಗಿದೆ. ಸಂಘರ್ಷಗಳಿಂದ ನಲುಗಿ ಹೋಗಿರುವ ಈ ದೇಶಕ್ಕೆ ಇದು ಬಹುದೊಡ್ಡ ಸೇವೆಯಾಗುವುದು’ ಎಂದು ಅಭಿಪ್ರಾಯಪಡಲಾಗಿದೆ. 

About the Author

ಸಿದ್ಧರಾಮ ಸ್ವಾಮಿಗಳು
(12 December 1958)

ಪ್ರಸ್ತುತ ಯಡಿಯೂರು ಗದಗ ಡಂಬಳ್ ಮಠದ ಪೀಠಾಧಿಪತಿಯಾಗಿರುವ ಜಗದ್ಗುರು ಶ್ರೀ ಸಿದ್ಧರಾಮ ಸ್ವಾಮೀಜಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಡಿಸೆಂಬರ್ 12, 1958ರಲ್ಲಿ ಜಂಗಮ ಸಮಾಜದ ತಂದೆ ರುದ್ರಯ್ಯ, ತಾಯಿ ಶಾಂತಮ್ಮಳ ಉದರದಲ್ಲಿ ಜನಿಸಿದ ಬಾಲಕ ಗುರುಪಾದಯ್ಯ. ಮುಂದೆ ಬಿಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡರು. ಅದಾದ ಬಳಿಕ ಬನಾರಸ್ ವಿವಿಯಲ್ಲಿ ಎಂಎ ಹಿಂದಿ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಉನ್ನತ ವ್ಯಾಸಂಗ ಪಡೆದುಕೊಂಡರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ 1994ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡರು. ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳ ಉತ್ತರಾಧಿಕಾರಿಯಾಗಿ ಇಡೀ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಹಿಂದಿನ ಮಠಾಧೀಶರ ...

READ MORE

Related Books