ಶರಣ ಮಾರ್ಗ

Author : ಸಿದ್ದಲಿಂಗ ದಬ್ಬಾ

Pages 120

₹ 110.00




Year of Publication: 2021
Published by: ಸಿದ್ದಲಿಂಗೇಶ್ವರ ಪ್ರಕಾಶನ
Address: ಕಲ್ಬುರ್ಗಿ

Synopsys

ಡಾ. ಸಿದ್ದಲಿಂಗ ದಬ್ಬಾ ಅವರ" ಶರಣ ಮಾರ್ಗ" ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ಒಟ್ಟು 11 ಲೇಖನಗಳಿದ್ದು ವೈಚಾರಿಕ ಕ್ರಾಂತಿ ಹರಿಕಾರ ಬಸವಣ್ಣ, ಬಸವಣ್ಣನವರ ಮತ್ತು ದೇವಾಲಯ ಸಂಸ್ಕೃತಿ,ಜೀವದ ಲಜ್ಜೆಯ ಮೋಹವನ್ನು ಅಳಿದು,ಅಂಬಿಗರ ಚೌಡಯ್ಯ ಮತ್ತು ಬಂಡಾಯ,ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ವಚನ ಸಾಹಿತ್ಯದಲ್ಲಿ ವೈಚಾರಿಕತೆ, ಶರಣ ಸಾಹಿತ್ಯದ ಪ್ರಸ್ತುತತೆ, ವಚನಕಾರರ ದೃಷ್ಟಿಯಲ್ಲಿ ಸ್ತ್ರೀ, ಶರಣ ಕಲ್ಯಾಣ ಒಂದು ಅವಲೋಕನ,ಸೇರಿದಂತೆ ಹಲವಾರು ಲೇಖನಗಳ ಕೃತಿಯೇ ಇದಾಗಿದ್ದು. ಬಸವಾದಿ ಶಿವಶರಣರು ಪ್ರಗತಿಪರ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ ಕುರಿತು ಪ್ರಮುಖ ವಚನಗಳ ವಿಶ್ಲೇಷಣೆ ಮಾಡುತ್ತಾ ಸಾಮಾಜಿಕ ನೆಲೆಯ ವಿಮರ್ಶೆ ಮಾಡಿದ ಪ್ರಯತ್ನ ಎದ್ದು ಕಾಣುತ್ತದೆ. ಕಲ್ಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 120 ಪುಟಗಳಿದ್ದು 110 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

About the Author

ಸಿದ್ದಲಿಂಗ ದಬ್ಬಾ

ಡಾ. ಸಿದ್ದಲಿಂಗ ದಬ್ಬಾ ರವರು ಚಿಂಚೋಳಿ ತಾಲೂಕಿನ ಭಂಟನಳ್ಳಿ ಗ್ರಾಮದಲ್ಲಿ ಜನಿಸಿದ್ದು.ಎಂ.ಎ ಪಿಎಚ್.ಡಿ ಪದವಿದರರಾದ ದಬ್ಬಾ ರವರು ಸಾಹಿತ್ಯ ಸಂಭ್ರಮ, ನುಡಿಗಡಣ,ಕಲ್ಬುರ್ಗಿ ಜಿಲ್ಲೆಯ ಸಾಹಿತಿಗಳು, ಕನ್ನಡ ವ್ಯಾಕರಣ, ಸೇರಿದಂತೆ 6 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು. ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ,ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ...

READ MORE

Related Books