ಶ್ರೀಆದಿ ಚುಂಚನಗಿರಿ

Author : ಕೆ.ಆರ್‌. ಕೃಷ್ಣಸ್ವಾಮಿ

Pages 180

₹ 160.00




Year of Publication: 1997
Published by: ತಿರುಮಲ ತಿರುಪತಿ ದೇವಸ್ಥಾನಮ್
Address: ತಿರುಪತಿ

Synopsys

‘ಶ್ರೀಆದಿ ಚುಂಚನಗಿರಿ’ ಕೆ.ಆರ್‌. ಕೃಷ್ಣಸ್ವಾಮಿ ಅವರ ಜನಪದ ಭಕ್ತಿಗೀತೆಗಳ ಸಂಕಲನವಾಗಿದೆ. ಈ ಕೃತಿಯು ತಿಳಿಸುವಂತೆ, ಜಾನಪದ ಸಾಹಿತ್ಯ ನಮ್ಮ ಸಾಹಿತ್ಯ, ಜೀವನದ ಬೆನ್ನೆಲುಬು. ನಮ್ಮ ಜನರ ಬಾಳು, ಸಂಸ್ಕೃತಿ, ಭಗವದ್ಭಕ್ತಿ, ರಸಿಕತೆ, ಕಷ್ಟಕಾರ್ಪಣ್ಯ ಗಳ ದರ್ಪಣವಾಗಿ ಜನಪದ ಹೊರಹೊಮ್ಮಿದೆ. ಪ್ರಾಚೀನ ಕನ್ನಡ ಸಾಹಿತ್ಯವೂ ಹಳ್ಳಿಗರ ನುಡಿಮುತ್ತುಗಳನ್ನು ಬಳಸಿಕೊಂಡಿದೆ. ಕನ್ನಡ ಸಾಹಿತ್ಯಕ್ಕೆ ಜಾನಪದ ಗೀತೆಗಳು ಕಥೆಗಳು ಹೊಸ ಬೆಳಕನ್ನು, ಹೊಸ ಉಸಿರನ್ನು ನೀಡಬಲ್ಲವು ಎಂಬುವುದನ್ನು ತಿಳಿಸುತ್ತದೆ.

ಈ ಕೃತಿಯೊಳಗಿನ ಅಧ್ಯಾಯಗಳ ವಿವರಗಳು; ಎಲ್ಲವನೋ ಶಿವನೆಲ್ಲವನೋ!, ಬೇಗ ಚುಂಚನಗಿರಿಯ ಸಿರಿ ಮಠ ಕಟ್ಟಲೆ, ಸುತ್ತಮುತ್ತ ಕೋಲು ಕೊಡಿ ಆದಿ ಭೇರುವಗೆ ಭೈರುವನ ರಥಗನ ಬನ್ನಿರೋ ಭರುವ ಚುಂಚನಗಿರಿಯಲ್ಲಿ ನೆಲೆಗೊಂಡ ! ಕೆನ್ನೆಮೇದಾರು ಕಡಿದಾರು, ಚೋಳೂರಿಗ್ವಾಲೆ ಬರೆದಾನು, ಜಗವ ತಲ್ಲಣಿಸಿ ಹರಿದಾವೆ. ಬೆಟ್ಟದಲ್ಲಿ ಬೀಡಿಕೆ ಬಿಡುತ್ತಾರೆ ಚುಂಚನಗಿರಿಯಸ್ವಾಮಿ ಭೈರಪ್ಪ ಬನಕಾಗಿ ಸ್ವಾಮಿಯ ಮಠವ ಹೋಗಿ ನೋಡಾನ ಬನ್ನಿ, ಮನಸ್ವಾಮಿ ಭೈರುವ ಬರುತ್ತಾನೆ - ಮಾತುಳ್ಳ ಜೋಗಿ ಉಣು ಬಾರೋ, ನವಾಪ್ಪಾನ ಗುರುವ ನೆನೆದವ, ಭೈರುವ ಮದಲಿಂಗನಾಗಿ ಬರುತಾನೆ, ಚುಂಚನಗಿರಿಯಲ್ಲಿ ನಮಗರು ನಮಸ್ಕಾರು ನಂಟರು, ಹರಿಸೇವೆ ಚೆಂದ ಗಿರಿಮ್ಯಾಲೆ ಸುತ್ತಿ ಬನ್ನಿ ನನ್ನ ಶಿಖರಾನ, ನಿನ್ ಗಿರಿಮೇಲೆ ಹಾಲ ಎರೆದೇವು, ನಗಾರಿ ಬಡಿದಾವೊ ಆಯ್ಯನ ಗಿರಿ ಮೇಲೆ, ಹೆಸರಿಗೆ ದೊಡ್ಡದು ಗುಡಿದೂರ, ಗುಡಿಯ ಒಳಗವನೆ ಭೈರುವಸ್ವಾಮಿ ಇರುವುದು ಕೈಲಾಸ, ಮುತ್ತು ಕಂಡ ಗಂಗಾಧರ ಮನಸೋತವನ್ನು ಒಳಗೊಂಡಿದೆ.

About the Author

ಕೆ.ಆರ್‌. ಕೃಷ್ಣಸ್ವಾಮಿ
(16 October 1936)

ಕರಾಕೃ ಎಂದು ಜಾನಪದ -ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಇರುವ ಕೆ.ಆರ್. ಕ್ರಿಷ್ಣಸ್ವಾಮಿ ಮಂಡ್ಯ ಮೂಲದ ಕವಿ-ಲೇಖಕ-ವಿದ್ವಾಂಸ. ನಾಗಮಂಗಲದಲ್ಲಿ ಜನಿಸಿದಿ ಅವರು ಹಾಸನ, ಮಲೆನಾಡು, ಚಿತ್ರದುರ್ಗ, ದಾವಣಗೆರೆ ಹೀಗೆ ನಾಡಿನ ಹಲವು ಹಳ್ಳಿಗಳನ್ನು ಸುತ್ತಿ ಅನೇಕ ಬಗೆಯ ಜನಪದ ಗೀತೆಗಳನ್ನು ಸಂಗ್ರಹಿಸಿ ಕೊಟ್ಟವರು. ಹಿರಿಯ ಕಲಾವಿದ ಆರ್‌.ಎಸ್‌. ನಾಯ್ಡು ಅವರಿಗೆ ಚಿರಪರಿಚಿತರಾಗಿದ್ದ ಕರಾಕೃ ಅವರು ತಮ್ಮ ಜಾನಪದ ಸಂಗ್ರಹದ ಕೃತಿಗಳಿಗೆ ನಾಯ್ಡು ಅವರ ರೇಖಾಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದರು. ಅವರ ಮನೆಯೇ ಒಂದು ವಸ್ತು ಸಂಗ್ರಹಾಲಯದಂತಿದೆ. ಅಪರೂಪದ ಕಲಾಕೃತಿಗಳು, ಹಸ್ತಪ್ರತಿಗಳು ಅವರ ಸಂಗ್ರಹದಲ್ಲಿವೆ.  ಕಾಳಿಂಗರಾಯ, ಜಾನಪದ ಕಥನ ಗೀತೆಗಳು, ಜಾನಪದ ಪ್ರೇಮಗೀತೆಗಳು, ಹೆಣ್ಣು ಕೊಟ್ಟೇವು ಅವರ ...

READ MORE

Related Books