
‘ಭಕ್ತಿಸಾರ’ ಲೇಖಕಿ ಎ.ಸರಸಮ್ಮ ಅವರು ರಚಿಸಿರುವ ಭಕ್ತಿಗೀತೆಗಳ ಮಾಲಿಕೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಪ್ರಕಾಶಕರು ‘ನಾವು ತಿಳಿಯದೆ ಮಾಡಿದ ಪಾಪಗಳನ್ನು ಕಳೆದು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತ ಭಕ್ತಿ ಪಥದಲ್ಲಿ ಸಾಗಲೆಂದು ಆಶಿಸುತ್ತ ಭಗವಂತನ ನಾಮಸ್ಮರಣೆ ಮಾಡಿ ಆತನ ಅನುಗ್ರಹಕ್ಕೆ ಪಾತ್ರರಾಗಲಿ ಎಂದು ಬಯಸಿ "ಭಕ್ತಿಸಾರ" ಎನ್ನುವ ಭಕ್ತಿಗೀತೆಗಳ ಮಾಲಿಕೆಯನ್ನು ರಚಿಸಿ ಭಗವಂತನ ಕೃಪೆಗೆ ಪಾತ್ರರಾಗಲು ಪ್ರೇರೇಪಿಸಿದ ಶ್ರೀಮತಿ ಎ. ಸರಸಮ್ಮನವರು ಕವನ ಸಂಕಲನ, ಕಥಾ ಸಂಕಲನ, ಚುಟುಕು ಸಂಕಲನ, ಸಾಮಾಜಿಕ ಕಾದಂಬರಿ, ಭಕ್ತಿ ಗೀತೆಗಳು, ನಾಟಕ ಹೀಗೆ ಸುಮಾರು ಮುವ್ವತ್ತು ಕೃತಿಗಳನ್ನು ರಚಿಸಿ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ. ಇವರ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲು ಆ ಭಗವಂತನ ಅನುಗ್ರಹ ಸದಾ ಇವರ ಮೇಲೆ ಇರಲಿ ಎಂದು ಹಾರೈಸಿದ್ದಾರೆ.
©2025 Book Brahma Private Limited.