ಸಂಪೂರ್ಣ ರಾಮಾಯಣ

Author : ಪ್ರಮೀಳಮ್ಮ

Pages 652

₹ 525.00




Year of Publication: 2023
Published by: ಸನ್‌ಸ್ಟಾರ್‌ ಪಬ್ಲಿಷರ್‌
Address: #4/1, ಕುಪ್ಪಸ್ವಾಮಿ ಬ್ಯುಲ್ಡಿಂಗ್‌, 19ನೇ ಕ್ರಾಸ್, ಕಬ್ಬನ್‌ಪೇಟೆ, ಬೆಂಗಳೂರು - 02
Phone: 8022224143

Synopsys

ರಾಮಾಯಣ-ಆದಿಕಾವ್ಯವೆನಿಸಿದ್ದು, ಇದರಲ್ಲಿ ಆದರಣೀಯ ಪಾತ್ರಗಳು ಹಲವಾರು ಇವೆ. ಕಥಾನಾಯಕ ಶ್ರೀರಾಮನ ಆದರ್ಶಗುಣಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ದಾರಿದೀಪವಾಗಿವೆ. ಜೀವನವೆಂದರೆ ಕಷ್ಟಸುಖಗಳು ಇದ್ದದ್ದೇ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟ ಎದುರಿಸದೆ ಸುಖ ಲಭಿಸದು. ಹಾಗೆಂದು ಕಷ್ಟವೇ ಬೇಡ ಎನ್ನಲಾಗದು. 'ಕಲ್ಲಾಗು ಕಷ್ಟಗಳ ಮಳೆ ಸುರಿಯೆ' ಎಂಬ ಕಗ್ಗದ ಮಾತು ಡಿ.ವಿ.ಗುಂಡಪ್ಪನವರ ಮಾತಿನ ಸಾರವು ಇದೇ ಆಗಿದೆ. ದುಷ್ಟಶಕ್ತಿಯ ದಮನ, ಶಿಷ್ಟತೆಯ ಸಾಧನೆಯು ಇಲ್ಲ ರಾಮನ ಅವತಾರದಲ್ಲಿ ಚಿತ್ರಿತವಾಗಿದೆ. ಮಹಾಭಾರತ ದ್ವಾಪರಯುಗದಲ್ಲಿ ನಡೆದಿರಬಹುದಾದ ದಾಯಾದಿ ಕಲಹ, ವಂಚನೆ, ಮೋಸ ಮುಂತಾದ ಅವಗುಣಗಳ ಪ್ರತೀಕವಾಗಿ ಕೌರವರ ಪಡೆ, ಧಾರ್ಮಿಕ, ಸತ್ಯ, ಸಹನೆ, ಹೊಂದಾಣಿಕೆಯ ಪ್ರತೀಕವಾಗಿ ಪಾಂಡವರು. ಈ ಎರಡರ ನಡುವೆ ನಡೆದ ಹೋರಾಟ, ಕೊನೆಗೆ ಸತ್ಯಕ್ಕೇ ಜಯ ಎಂಬುದನ್ನು ಚಿತ್ರಿಸುತ್ತದೆ.

About the Author

ಪ್ರಮೀಳಮ್ಮ
(18 July 1946)

ಪ್ರಮೀಳಮ್ಮ ಮೂಲತಃ ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲದವರು. ತಂದೆ ಸಿದ್ದರಾಮಯ್ಯ, ತಾಯಿ ಗುರುಸಿದ್ದಮ. ಬೆಂಗಳೂರಿನ ಜಗದ್ಗುರು ಶ್ರೀ ಶಿವರಾಮೇಶ್ವರ ಫ್ರೌಡಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು : ಸರ್ವಜ್ಞ ವಚನಾಮೃತ, ದೊಡ್ಡಯ್ಯ ಹೇಳಿದ ಕಥೆಗಳು, ಕನ್ನಡ ಕವಿಲೋಕ ನಚಿಕೇತ, ಜೀಮೂತವಾಹನ, ಚಾವಡಿಯ ಕಥೆಗಳು, ಸುಭಾಷಿತಗಳ ಸಂಗ್ರಹ , ಮಕ್ಕಳಿಗಾಗಿ ನೀತಿಕಥೆ, ದಿನಕ್ಕೊಂದು ಗಾದೆ, ಗಾದೆಗೊಂದು ನೀತಿಕತೆ, ರಾಮಾಯಣ, ಮಹಾಭಾರತ ಸರಳಗನ್ನಡದಲ್ಲಿ, ಭಗವದ್ಗೀತೆ.  ...

READ MORE

Related Books