ಇಸ್ಲಾಂ ಕೆಲವು ತಪ್ಪು ಗ್ರಹಿಕೆಗಳು

Author : ಹಸನ್ ನಯೀಂ ಸುರಕೋಡ

Pages 96

₹ 60.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಇಸ್ಲಾಂ ಕೆಲವು ತಪ್ಪು ಗ್ರಹಿಕೆಗಳು’ ಕೃತಿಯು ಆಸ್ಕರ್ ಅಲಿ ಎಂಜಿನಿಯರ್ ಅವರ ಮೂಲ ಕೃತಿಯಾಗಿದೆ. ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಈ ಕೃತಿಯನ್ನು ಅನುವಾದಿಸಿದ್ದಾರೆ. ಧರ್ಮ ಮತ್ತು ರಾಜಕಾರಣ ಸಮಾನಾಂತರವನ್ನು ಕಾಪಾಡಿಕೊಳ್ಳದೆ ಒಂದನ್ನೊಂದು ಸಂಧಿಸಿದರೆ ಆಗುವ ಅನಾಹುತವೇನೆಂದು ನಾವಿಂದು ಕಾಣುತ್ತಿದ್ದೇವೆ. ರಾಜಕೀಯವು ಧರ್ಮವನ್ನು ತನ್ನ ಅಧಿಕಾರದ ಆಯುಧವನ್ನಾಗಿಸಿ ಸ್ವಂತ ಹಿತಾಸಕ್ತಿಗೆ ಬಳಸಿಕೊಂಡಾಗ ನಡೆಯಬಹುದಾದದ್ದು ಏನೆಂದು ಡಾ. ಅಸ್ಗರ್ ಅಲಿ ಎಂಜಿನಿಯರ್ ಬರೆದ ಲೇಖನಗಳಲ್ಲಿ ಕಾಣಬಹುದು. ಆತರಕ್ಷಣೆಗಾಗಿ ಮಾತ್ರ ಮಾಡಬಹುದೆಂಬ ಅಲ್ಲಿನ ಹೇಳಿಕೆಯೊಂದನ್ನೇ ಸಮರ್ಥಿಸಿಕೊಂಡು ಕುರ್ ಆನ್‌ ನ ಸಂದೇಶವೆಂದು ಸಾರುತ್ತಾ ಚರಿತ್ರೆಯಲ್ಲಿ ಅನೇಕ ದಾಳಿಕೋರ ಪ್ರಭುಗಳು ನೆರೆರಾಷ್ಟ್ರಗಳಿಗೆ ನುಗ್ಗಿ ಸಂಪತ್ತನ್ನು ದೋಚುವಲ್ಲಿ ನಿರತರಾದರು. ಕ್ರಮೇಣ ಕುರ್ ಆನ್‌ ಎಲ್ಲ ಮೌಲ್ಯಗಳನ್ನು ಗಾಳಿಗೆ ತೂರಿದ ಈ ಧರ್ಮವನ್ನು ಅನೇಕರು ತಪ್ಪಾಗಿ ಅರ್ಥೈಸಿಕೊ೦ಡದ್ದನ್ನು ಇಲ್ಲಿ ಚರ್ಚಿಸಲಾಗಿದೆ.

About the Author

ಹಸನ್ ನಯೀಂ ಸುರಕೋಡ

ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...

READ MORE

Reviews

(ಹೊಸತು, ಜನವರಿ 2023, ಪುಸ್ತಕ ಮಾಹಿತಿ)

ಧರ್ಮ ಮತ್ತು ರಾಜಕಾರಣ ಸಮಾನಾಂತರವನ್ನು ಕಾಪಾಡಿಕೊಳ್ಳದೆ ಒಂದನ್ನೊಂದು ಸಂಧಿಸಿದರೆ ಆಗುವ ಅನಾಹುತವೇನೆಂದು ನಾವಿಂದು ಕಾಣುತ್ತಿದ್ದೇವೆ. ರಾಜಕೀಯವು ಧರ್ಮವನ್ನು ತನ್ನ ಅಧಿಕಾರದ ಆಯುಧವನ್ನಾಗಿಸಿ ಸ್ವಂತ ಹಿತಾಸಕ್ತಿಗೆ ಬಳಸಿಕೊಂಡಾಗ ನಡೆಯಬಹುದಾದದ್ದು ಏನೆಂದು ಡಾ. ಅಸ್ಗರ್ ಅಲಿ ಎಂಜಿನಿಯರ್ ಬರೆದ ಲೇಖನಗಳಲ್ಲಿ ಕಾಣಬಹುದು. ಜಗತ್ತಿನಾದ್ಯಂತ ಭಯೋತ್ಪಾದನೆ ಅಪಾಯಕಾರಿ ಮಟ್ಟವನ್ನೂ ಮೀರಿ ವಿಜೃಂಭಿಸುತ್ತಿರುವಾಗ, ಧರ್ಮದ ಬಗ್ಗೆ ನಮ್ಮ ದೃಷ್ಟಿಕೋನವನ್ನು ವಿಮರ್ಶೆಗೊಳಪಡಿಸಬೇಕಾದ ಅಗತ್ಯವನ್ನು ಇವು ಒತ್ತಿ ಹೇಳುತ್ತವೆ. ಪ್ರವಾದಿಗಳ ಕಾಲದಲ್ಲಿ ಕುರ್ ಆನ್‌ನಲ್ಲಿನ ಉಲ್ಲೇಖದ್ರ ಶಾಂತಿ ಕರುಣೆ-ನ್ಯಾಯ ಮತ್ತು ಸತ್ಯಸಂಧತೆಯೇ ಆಗಿದ್ದು ಇವೆಲ್ಲ ಶ್ರೇಷ್ಟ ಮೌಲ್ಯಗಳೆಂದೇ ಪರಿಗಣಿಸಲ್ಪಟ್ಟಿದ್ದವು, ಎಂದಿನಿಂದ ರಾಜಕೀಯದ ಮಲಿನ ಹಸ್ತಕ್ಷೇಪ ಧರ್ಮದಲ್ಲಿ ಪ್ರಾರಂಭವಾಯಿತೋ ಅಂದಿನಿಂದ ವಿಶ್ವಾದ್ಯಂತ ಧರ್ಮಗಳ ಎಲ್ಲ ಉಲ್ಲೇಖಗಳೂ ತಪ್ಪಾಗಿ ಅರ್ಥೈಸಲ್ಪಟ್ಟು ಎಲ್ಲ ಧರ್ಮಗಳೂ ತಮ್ಮ ಮೌಲ್ಯ ಕಳೆದುಕೊಂಡು ಸ್ವಾರ್ಥ ಮೆರೆಯತೊಡಗಿದವು. ರಾಜರಿಗನುಕೂಲವಾಗಿ ಧರ್ಮ ಮಾತಾಡತೊಡಗಿತು. ಇದಕ್ಕೆ ಇಸ್ಲಾಂ ಕೂಡ ಹೊರತಲ್ಲ ಆಕ್ರಮಣ ಎಂದೂ ಬ‌ನ್‌ನ ಸಂದೇಶವಾಗಿರಲಿಲ್ಲ. ಅಲ್ಲಿ ಸಹಬಾಳ್ವೆಗೆ ಆದ್ಯತೆ ಇತ್ತು, ಆತರಕ್ಷಣೆಗಾಗಿ ಮಾತ್ರ ಮಾಡಬಹುದೆಂಬ ಅಲ್ಲಿನ ಹೇಳಿಕೆಯೊಂದನ್ನೇ ಸಮರ್ಥಿಸಿಕೊಂಡು ಕುರ್ ಆನ್‌ ನ ಸಂದೇಶವೆಂದು ಸಾರುತ್ತಾ ಚರಿತ್ರೆಯಲ್ಲಿ ಅನೇಕ ದಾಳಿಕೋರ ಪ್ರಭುಗಳು ನೆರೆರಾಷ್ಟ್ರಗಳಿಗೆ ನುಗ್ಗಿ ಸಂಪತ್ತನ್ನು ದೋಚುವಲ್ಲಿ ನಿರತರಾದರು. ಕ್ರಮೇಣ ಕುರ್ ಆನ್‌ ಎಲ್ಲ ಮೌಲ್ಯಗಳನ್ನು ಗಾಳಿಗೆ ತೂರಿದ ಈ ಧರ್ಮವನ್ನು ಅನೇಕರು ತಪ್ಪಾಗಿ ಅರ್ಥೈಸಿಕೊ೦ಡದ್ದನ್ನು ಇಲ್ಲಿ ಚರ್ಚಿಸಲಾಗಿದೆ.

 

 

Related Books