ಶ್ರೀ ವೈಷ್ಣವ ದರ್ಶನ ಮತ್ತು ಸಂಸ್ಕೃತಿ

Author : ಕೆ.ಆರ್. ರಂಗಾಚಾರ್ (ರಘುಸುತ)

Pages 377

₹ 125.00




Year of Publication: 2001
Published by: ಪುಲಿಕೇಶಿ ಪ್ರಕಾಶನ
Address: ಪುಲಿಕೇಶಿ ರಸ್ತೆ, 1ನೇ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-560022

Synopsys

ಶ್ರೀ ವೈಷ್ಣವ ದರ್ಶನದ ಇತಿಹಾಸ ಕುರಿತಂತೆ ಲೇಖಕ ಕೆ.ಆರ್. ರಂಗಾಚಾರ (ರಘುಸುತ) ಅವರು ಬರೆದ ಕೃತಿ-ಶ್ರೀ ವೈಷ್ಣವ ದರ್ಶನ ಮತ್ತು ಸಂಸ್ಕೃತಿ. ಶ್ರೀ ವೈಷ್ಣವ ದರ್ಶನ ಮತ್ತು ವಿಶಿಷ್ಟಾದ್ವೈತ -ಈ ಎರಡರ ಹಂದರದ ಮೇಲೆ ಸಂಸ್ಕೃತಿಯು ಹರಡಿದೆ. ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಹಿರಿಯ ಸಾಹಿತಿ ಪ್ರೊ. ಎಸ್.ಕೆ. ರಾಮಚಂದ್ರರಾವ್ ‘ಸಾಮಗ್ರಿಯನ್ನು ತಾಳ್ಮೆಯಿಂದ, ಶ್ರಮದಿಂದ ಸಂಗ್ರಹ ಮಾಡಿದ್ದು, ಆ ಸಾಮಗ್ರಿಗೆ ಸ್ವಾರಸ್ಯವನ್ನೂ, ಸಾರ್ಥಕತೆಯನ್ನೂ ತಂದುಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಶ್ರೀ ವೈಷ್ಣವ ದರ್ಶನವು ತೀರಾ ಪ್ರಾಚೀನ ದರ್ಶನ. ವೈಷ್ಣವ ದರ್ಶನದ ಇತಿಹಾಸ, ಭಾರತದಲ್ಲಿ ಶ್ರೀ ವೈಷ್ಣವ ಧರ್ಮ, ಕೀರ್ತನ ಸಾಹಿತ್ಯದಲ್ಲಿ ಶ್ರೀ ವೈಷ್ಣವ ದರ್ಶನ, ಆಧುನಿಕ ಕನ್ನಡದಲ್ಲಿ ಶ್ರೀ ವೈಷ್ಣವ ದರ್ಶನ ಹೀಗೆ ವಿವಿಧ ಅಧ್ಯಾಯಗಳಡಿ ವೈಷ್ಣವ ದರ್ಶನದ ವಿರಾಟ ಸ್ವರೂಪವನ್ನು ತೋರಲಾಗಿದೆ.

About the Author

ಕೆ.ಆರ್. ರಂಗಾಚಾರ್ (ರಘುಸುತ)
(08 May 1929 - 27 January 2003)

ಭೂಗೋಳ ಶಾಸ್ತ್ರಜ್ಞ ಕೆ.ಆರ್. ರಂಗಾಚಾರ್ ಅವರು ಚಿಕ್ಕಬಳ್ಳಾಪುರದ ಬಳಿಯ ನೊಳಕುಂಟೆ ಹೊಸೂರಿನವರು. (ಜನನ: 08-05-1929). ತಂದೆ ರಘುನಾಥಾಚಾರ್, ತಾಯಿ ಇಂದಿರಮ್ಮ. ಇವರ ಕಾವ್ದನಾಮ ರಘುಸುತ.  ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವೀಧರರು. ಟೀಚರ್ಸ್ ಕಾಲೇಜಿನಿಂದ ಬಿ.ಎಡ್‌ ಪದವೀಧರರು. ಮಿರ್ಲೆ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. 100ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಇವರ ಮೊದಲ ಕಾದಂಬರಿ ಆಶಾನಿರಾಶ (1924)  ಪ್ರಕಟಗೊಂಡಿತ್ತು. ಪೊಯ್‌ಸಳ, ಮೀರ್ ಸಾದಿಕ್‌, ಸುಳಿಗಾಳಿ ಸಹ ಕಾದಂಬರಿಗಳು.   ‘ಗಗನ ಕುಸುಮ’ ಎಂಬುದು ವೈಜ್ಞಾನಿಕ ಕಾದಂಬರಿ. ‘ಮೇಸ್ಟ್ರಚೀಲ’ ಎಂಬುದು ನಗೆಕಾದಂಬರಿ. ‘ಪತ್ತೇದಾರ’ ಕಾವ್ಯನಾಮದಲ್ಲಿ ಪತ್ತೆದಾರಿ ಕಾದಂಬರಿಗಳನ್ನು ಬರೆದಿದ್ದಾರೆ. ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಲಾಯರ್ ರಾದ್ಧಾಂತ, ರಿಹರ್ಸಲ್‌ ಗಡಿಬಿಡಿ, ಅಲಾಲ್‌ಟೋಪಿ, ತಿಪ್ಪರಲಾಗ, ಎಡಬಿಡಂಗಿ, ಪ್ರಾಕ್ಟೀಶ್‌ ಪರದಾಟ, ಚೀಟಿಕಾಟ, ಹನಿಮೂನ್‌, ಭಂಡರಬೇಸ್ರು, ...

READ MORE

Related Books